ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಸಂಬಂಧ, ಸಿಐಡಿ ಅಧಿಕಾರಿಗಳು ಭೇಟೆ ಮುಂದುವರೆಸಿದ್ದಾರೆ. ಇದೀಗ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ 22ನೇ Rank ಗಳಿಸಿದ್ದಂತ ಮತ್ತೊಬ್ಬ ಅಭ್ಯರ್ಥಿಯನ್ನು ಬಂಧಿಸಿದ್ದಾರೆ.

BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಆಡಳಿತ ಯಂತ್ರ’ಕ್ಕೆ ಮೇಡರ್ ಸರ್ಜರಿ: ’13 ಡಿವೈಎಸ್ಪಿ ವರ್ಗಾವಣೆ’ ಮಾಡಿ ಆದೇಶ | DYSP Transfer

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ತನಿಖೆ ನಡೆಸುತ್ತಿರುವಂತ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಮುಂದುವರೆದು ಕಲ್ಯಾಣ ಕರ್ನಾಟಕ ಕೋಟಾದಡಿ 22ನೇ Rank ಗಳಿಸಿದ್ದಂತ ಸಿದ್ಧಗೌಡ ಎಂಬಾತನನ್ನು ಬಂಧಿಸಿದೆ.

‘ನಮ್ಮ ಕ್ಲಿನಿಕ್‌’ಗೆ ಲೋಗೊ ಡಿಸೈನ್‌ ಮಾಡಿ ‘ಪ್ರಶಸ್ತಿ ಗೆಲ್ಲಿ’

ಪಿಎಸ್ಐ ನೇಮಕಾತಿಯಲ್ಲಿ ಆಯ್ಕೆಯಾಗಿದ್ದಂತ  ಸಿದ್ಧಗೌಡ, ಅಕ್ರಮದಲ್ಲಿ ಭಾಗಿಯಾಗಿದ್ದರ ಹಿನ್ನಲೆಯಲ್ಲಿ ಸಿಐಡಿ ನಿನ್ನೆ ವಿಚಾರಣೆ ನಡೆಸಿತ್ತು. ವಿಚಾರಣೆಯಲ್ಲಿ ಅವರು ಅಕ್ರಮವೆಸಗಿರೋದು ತಿಳಿದು ಬಂದ ಹಿನ್ನಲೆಯಲ್ಲಿ ಇಂದು ಬಂಧಿಸಲಾಗಿದೆ.

BREAKING NEWS : ‘ಪ್ರವೀಣ್‌ ಕೊಲೆ ಮಾಡಿದ್ದು, ಕೇರಳದವರಲ್ಲ ಸ್ಥಳೀಯರು’ : ಸ್ಪೋಟಕ ಮಾಹಿತಿ ಬಿಚ್ಚಿಟ್ಟ ʼಆರಗ ಜ್ಞಾನೇಂದ್ರ ʼ

ಅಂದಹಾಗೇ ಸಿಐಡಿಯಿಂದ ಬಂಧಿಸಲ್ಪಟ್ಟಿರುವಂತ ಸಿದ್ಧಗೌಡ ಅವರು, ಯಾದಗಿರಿ ತಾಲೂಕಿನ ಮುದ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಫ್ ಡಿಎ ಆಗಿ ಕೆಲಸ ಮಾಡುತ್ತಿದ್ದರು. ಈತ ಪಿಎಸ್ಐ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಸಂಬಂಧಿ ಎಂಬುದಾಗಿ ತಿಳಿದು ಬಂದಿದೆ.

Share.
Exit mobile version