ತಮಿಳುನಾಡು : ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಹಿಂದಿ ಭಾಷೆ ಹೇರಿಕೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ 85 ವರ್ಷದ ವೃದ್ಧರೋರ್ವರು, ಡಿಎಂಕೆ ಕಚೇರಿ ಮುಂಭಾಗ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ.

ತಾರಕ್ಕೇರಿದ ಗಡಿ ವಿವಾದ: ಮಹಾರಾಷ್ಟ್ರ- ಕರ್ನಾಟಕ ಗಡಿಯಲ್ಲಿ ಕೆಟ್ಟೆಚ್ಚರಕ್ಕೆ ಪೊಲೀಸರಿಗೆ ಗೃಹ ಸಚಿವರ ಸೂಚನೆ

ಇಂದು ಬೆಳಗ್ಗೆ ಮೆಟ್ಟೂರು ಪಕ್ಕದ ತಲೈಯೂರಿನಲ್ಲಿರುವ ಡಿಎಂಕೆ ಪಕ್ಷದ ಕಚೇರಿಯ ಮುಂದೆ ಹಿಂದಿ ಹೇರಿಕೆಯನ್ನು ವಿರೋಧಿಸಿ ಡಿಎಂಕೆಯ ಮಾಜಿ ಕೃಷಿ ಒಕ್ಕೂಟದ ಸಂಘಟಕ ತಂಗವೇಲ್ ಪ್ರತಿಭಟನೆ ನಡೆಸಿದರು. ಬಳಿಕ ಬೆಳಗ್ಗೆ 11 ಗಂಟೆ ಸುಮಾರಿಗೆ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಡಿಎಂಕೆಯ ಸಕ್ರಿಯ ಸದಸ್ಯ ತಂಗವೇಲ್ ಅವರು ಹಿಂದಿಯನ್ನು ಶಿಕ್ಷಣ ಮಾಧ್ಯಮವಾಗಿ ತರಲು ಕೇಂದ್ರದ ಕ್ರಮದಿಂದಾಗಿ ಸಂಕಷ್ಟಕ್ಕೊಳಗಾಗಿದ್ದರು ಎಂದು ತಿಳಿದು ಬಂದಿದೆ.

ಮೋದಿ ಸರ್ಕಾರ, ಕೇಂದ್ರ ಸರ್ಕಾರ, ನಮಗೆ ಹಿಂದಿ ಬೇಡ, ನಮ್ಮ ಮಾತೃಭಾಷೆ ತಮಿಳು, ಹಿಂದಿ ವಿದೂಷಕರ ಭಾಷೆ, ಹಿಂದಿ ಭಾಷೆ ಹೇರುವುದು ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಿಂದಿ ತೊಲಗಿ, ಹಿಂದಿ ತೊಲಗಿ, ಹಿಂದಿ ತೊಲಗಿ ಎಂದು ಆತ್ಮಹತ್ಯೆಗೂ ಮುನ್ನಾ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗುತ್ತಿದೆ.

BREAKING NEWS: ಸೆಲ್ಫಿ ತಂದ ಯಡವಟ್ಟು: ಫಾಲ್ಸ್‌ಗೆ ಜಾರಿ ಬಿದ್ದು ಬೆಳಗಾವಿಯ ನಾಲ್ವರು ಯುವತಿಯರು ದುರ್ಮರಣ

Share.
Exit mobile version