ದೆಹಲಿಯಲ್ಲಿ ಮತಗಳ್ಳತನ ವಿರುದ್ಧ ಪ್ರತಿಭಟನೆ : ‘ಕನ್ನಡದಲ್ಲೇ’ ಘೋಷಣೆ ಕೂಗಿದ ಪ್ರಿಯಾಂಕಾ ಗಾಂಧಿ | WATCH VIDEO

ನವದೆಹಲಿ: ದೆಹಲಿಯಲ್ಲಿ ನಡೆದ ಮತಗಳ್ಳತನದ ವಿರುದ್ಧದ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕನ್ನಡದಲ್ಲಿ ಘೋಷಣೆಗಳನ್ನು ಕೂಗಿದರು. ಬಿಹಾರದಲ್ಲಿ ಚುನಾವಣಾ ಆಯೋಗ ಅಕ್ರಮವಾಗಿ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ INDIA ಮೈತ್ರಿ ಪಕ್ಷಗಳು ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ, ಅವರು “ಬೇಡ, ಬೇಡ… SIR ಬೇಡ” ಎಂಬ ಘೋಷಣೆ ಕೂಗಿ, ಇತರರನ್ನೂ ಕನ್ನಡದಲ್ಲಿ ಘೋಷಣೆಗಳನ್ನು ಕೂಗುವಂತೆ ಉತ್ತೇಜಿಸಿದರು.