ಪ್ರಿನ್ಸ್ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ರಿಲೀಸ್ ಆಗಿದ್ದು, ಮಿಕ್ಸ್ಡ್ ರೆಸ್ಪಾನ್ಸ್ ಸಿಕ್ತಿದೆ. ಈಗಾಗಲೇ ಟಾಲಿವುಡ್ ಹಲವು ತಾರೆಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ನಂದಮೂರಿ ಬಾಲಕೃಷ್ಣ ಸರ್ಕಾರು ವಾರಿ ಪಾಟ ಸಿನಿಮಾ ನೋಡಲಿದ್ದಾರೆ.
ಬಾಲಯ್ಯ ಹಾಗೂ ಪ್ರಿನ್ಸ್ ನಡುವೆ ಒಳ್ಳೆ ಒಡನಾಟವಿದೆ. ಬಾಲಯ್ಯ ನಡೆಸಿಕೊಡುವ ಟಾಕ್ ಶೋವೊಂದರಲ್ಲಿ ಈ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಮಹೇಶ್ ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ನೋಡಲು ಬಾಲಯ್ಯ ರೆಡಿಯಾಗಿದ್ದಾರೆ
ಹಾಗ್ ನೋಡಿದ್ರೆ ಬಾಲಯ್ಯ ಬೇರೆ ಸ್ಟಾರ್ಸ್ ಗಳ ಸಿನಿಮಾ ನೋಡುವುದು ಅಪರೂಪದಲ್ಲಿ ಅಪರೂಪ. ಆದ್ರೆ ಮಹೇಶ್ ಬಾಬು ಸಿನಿಮಾ ನೋಡಲು ಬಾಲಯ್ಯ ಉತ್ಸುಕರಾಗಿದ್ದಾರೆ. ಹೀಗಾಗಿ ಸ್ಪೆಷಲ್ ಶೋ ಏರ್ಪಡಿಸಲು ಚಿತ್ರತಂಡ ಸಜ್ಜಾಗಿದೆ. ಅಂದಹಾಗೇ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದು, ಪರಶುರಾಮ್ ಆಕ್ಷನ್ ಕಟ್ ಹೇಳಿದ್ದಾರೆ.