ಬೆಂಗಳೂರು: ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್, ಗುರು ಸಾರ್ವಭೌಮ ಬ್ಯಾಂಕ್, ವಸಿಷ್ಠ ಸಹಕಾರಿ ಬ್ಯಾಂಕುಗಳ ಠೇವಣಿದಾರರು, ಕಾಂಗ್ರೆಸ್ ಮುಖಂಡರಾದ ಡಾ.ಶಂಕರ್‌ ಗುಹಾ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ ರವರ ನೇತೃತ್ವದಲ್ಲಿ ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿ ತಮಗಾಗಿರುವ ಅನ್ಯಾಯದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತುವಂತೆ ಮನವಿ‌ ಮಾಡಿದರು.

ಈ‌ ಪ್ರಕರಣವನ್ನು 6 ತಿಂಗಳುಗಳ ಹಿಂದೆಯೇ ಸಿಬಿಐ ತನಿಖೆಗೆ ವಹಿಸಲಾಗಿದ್ದರೂ ಸಹ, ಬಿಜೆಪಿಯ ಸಂಸದ ಹಾಗೂ ಶಾಸಕರು ತನಿಖಾಧಿಕಾರಿಯನ್ನೇ ನೇಮಿಸದಂತೆ ತಮ್ಮ‌ಪ್ರಭಾವ ಬಳಸಿ ತಡೆ‌ಹಿಡಿದ್ದಿದ್ದಾರೆ‌. ಈ ಪ್ರಕರಣಕ್ಕೆ ವಿಶೇಷ ತನಿಖಾ ದಳ ನೇಮಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.

ಈ ಬ್ಯಾಂಕ್ ಗಳ ಹಗರಣದಿಂದ ಠೇವಣಿದಾರರು ಲಕ್ಷಾಂತರ ರೂ.ಕಳೆದುಕೊಂಡಿದ್ದಾರೆ. ಬಿಜೆಪಿಯವರೇ ಕೆಲ ಜನಪ್ರತಿನಿಧಿಗಳೇ ಈ ಹಗರಣದಲ್ಲಿ ಶಾಮೀಲಾಗಿದ್ದು, ಅವರ ವಿರುದ್ಧ ಕ್ರಮಕೈಗೊಂಡು ಠೇವಣಿದಾರರ ಹಣ ಮರಳಿಸುವಂತಾಗಬೇಕು ಎಂದು ಕೋರಿದರು‌. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಿಯಾಂಕ ಗಾಂಧಿಯವರು , ಚುನಾವಣೆ ಸಮಯದಲ್ಲಿ ಸಂತ್ರಸ್ತರು ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ತಿರುಗಿಬಿದ್ದು ಕೂಗಾಡುತ್ತಿರುವ ವಿಡಿಯೋ ನೋಡಿದ್ದೇನೆ. ಸಿಬಿಐ ನಿಮಗೆ ನ್ಯಾಯ ಒದಗಿಸದಿದ್ದರೆ , ರಾಜ್ಯ ಸರ್ಕಾರವೇ ವಿಶೇಷ ತನಿಖಾ ತಂಡವನ್ನು ರಚಿಸಿ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಅವರಲ್ಲಿ ತಿಳಿಸುತ್ತೇನೆ . ಚುನಾವಣೆ ನಂತರ ಈ ಬಗ್ಗೆ ತೀರ್ಮಾನ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿರುತ್ತಾರೆ.

ಗುರುರಾಘವೇಂದ್ರ ಸಹಕಾರಿ ಬ್ಯಾಂಕ್, ವಸಿಷ್ಠ ಸಹಕಾರಿ ಬ್ಯಾಂಕ್ ಗಳಲ್ಲಿ 3 ಲಕ್ಷ ಠೇವಣಿದಾರರು ಮೋಸ ಹೋಗಿದ್ದು, ಇದರಲ್ಲಿ 300 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. ರೂ.3200 ಕೋಟಿ ಹಗರಣ ಇದಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಈ ವಿಚಾರವಾಗಿ ಹೋರಾಟ ಮಾಡಿದ್ದರು.

ರಾಜ್ಯ ಒಕ್ಕಲಿಗ ಸಮುದಾಯದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಣೆ

Share.
Exit mobile version