ಬೆಂಗಳೂರು : ನಾಗರಬಾವಿಯಲ್ಲಿರುವ ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆಯೊಂದು ಸಿಬಿಎಸ್ಇ ಬೋರ್ಡ್ ಸಿಲೆಬಸ್ ಹೇಳಿಕೊಡುವುದಾಗಿ ವಂಚನೆ ಮಾಡಿದ ಘಟನೆ ಸಂಬಂಧ ಇದೀಗ ಆರ್ಕಿಡ್ ಶಾಲೆ ವಿರುದ್ಧ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ಕ್ರಿಮಿನಲ್ ಕೇಸ್ ದಾಖಲಿಸಿದೆ.
ಅಲ್ಲದೇ ಆರ್ಕಿಡ್ ಶಾಲಾ ಆಡಳಿತ ಮಂಡಳಿ ಸೇಂಟ್ ತೆರೇಸಾ ಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, . ಇನ್ನು ಆರ್ಕಿಡ್ ಶಾಲಾ ಆಡಳಿತ ಮಂಡಳಿ ಹೊಸ ಶಾಲೆ ತೆರೆಯದಂತೆ ನಿರ್ಬಂಧ ಹೇರಲಾಗುತ್ತಿದೆ.
ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆಂದು ಪೋಷಕರು ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದರು. ಈ ಶಾಲೆಯಲ್ಲಿ ಸಿಬಿಎಸ್ಇ ಬೋರ್ಡ್ ಸಿಲೆಬಸ್ ಮಾನ್ಯತೆಯನ್ನೇ ಪಡೆಯದೇ ನಡೆಸುತ್ತಿದೆ .ಶಾಲೆಯೂ ಪೋಷಕರಲ್ಲಿ ಸಿಬಿಎಸ್ಇ ಬೋರ್ಡ್ ಸಿಲೆಬಸ್ ಪಾಠ ಮಾಡಲಾಗುತ್ತದೆ ಎಂದು ನಂಬಿಸಿ ಪೋಷಕರಿಗೆ ಲಕ್ಷಾಂತರ ಹಣ ವಂಚನೆ ಮಾಡಿದೆ.ಈ ದೋಖಾ ಮಕ್ಕಳು ಪಬ್ಲಿಕ್ ಎಕ್ಸಾಂ ಪಡೆಯಲು ಮುಂದಾದಾಗ ಶಾಲೆ ನಡೆಸಿದ ಮೋಸ ವಿಚಾರ ಬೆಳಕಿಗೆ ಬಂದಿದೆ.ಪೋಷಕರು ಧನಿ ಎತ್ತಿದ ಬಳಿಕ ಶಾಲಾ ಆಡಳಿತ ಮಂಡಳಿ ಸಿಬಿಎಸ್ಇ ಬೋರ್ಡ್ ಮಾನ್ಯತೆಯನ್ನು ಪಡೆದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡಿದೆ. ಇದ್ರಿಂದ ಶಾಲೆಯಲ್ಲಿ ಓದಿದ ಅದೇಷ್ಟು ಮಕ್ಕಳಿಗೆ ಭಾರೀ ಸಮಸ್ಯೆ ಎದುರಾಗಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 420, 34 ಅಡಿಯಲ್ಲಿ ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆಯ ಪ್ರಿನ್ಸಿಪಾಲ್ ಮಂಜುಳಾ ಬಿ. ಸೇಂಟ್ ತೆರೇಸಾ ಎಜುಕೇಷನಲ್, ಕಲ್ಚರಲ್ ಆ್ಯಂಡ್ ಸೋಶಿಯಲ್ ಡೆವಲಪ್ಮೆಂಟ್ ಸೊಸೈಟಿಯ ಅಧ್ಯಕ್ಷ ರಾಲ್ಫ್ ಆಂಡ್ರೇಡ್, ಟ್ರಸ್ಟ್ನ ಕಾರ್ಯದರ್ಶಿ ಸಂಜಯ್ ಎಲ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರೈತರಿಗೆ ಮುಖ್ಯ ಮಾಹಿತಿ : ಜ.30 , 31 ರಂದು ದಾವಣಗೆರೆಯಲ್ಲಿ ಕುರಿ-ಮೇಕೆ ಸಾಕಾಣಿಕೆ ತರಬೇತಿ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಸಿ.ನಾರಾಯಣ ಗೌಡ ಭೇಟಿ : ಕಾಮಗಾರಿ ವೀಕ್ಷಣೆ