ಸುಭಾಷಿತ :

Tuesday, January 28 , 2020 2:07 PM

ಪೃಥ್ವಿ ಶಾ ನಿಷೇಧ ಇಂದಿಗೆ ಮುಕ್ತಾಯ… ನ. 17ರಂದು ಮತ್ತೆ ಮೈದಾನಕ್ಕೆ…


Friday, November 15th, 2019 11:16 am

ಮುಂಬೈ: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಎಂಟು ತಿಂಗಳ ನಿಷೇಧಕ್ಕೊಳಗಾಗಿದ್ದ ಟೀಂ ಇಂಡಿಯಾದ ಆಟಗಾರ ಪೃಥ್ವಿ ಶಾ ಮುಂದಿನ ವಾರ ಮತ್ತೆ ಮೈದಾನಕ್ಕಿಳಿದು ಪ್ರದರ್ಶನ ನೀಡಲಿದ್ದಾರೆ.

ನ.15ರಂದು ಪೃಥ್ವಿ ನಿಷೇಧ ಕೊನೆಗೊಳ್ಳಲಿದೆ. ಸದ್ಯ ನಡೆಯುತ್ತಿರುವ ಸೈಯದ್ ಅಲಿ ಮುಷ್ತಾಕ್​​ ಟೂರ್ನಿಯಲ್ಲಿ ಮುಂಬೈ ತಂಡದ ಪರ ಪೃಥ್ವಿ ಶಾ ಆಡಲಿದ್ದು, ನವೆಂಬರ್ 17ರಂದು ನಿಷೇಧದ ಬಳಿಕ ಪ್ರಥಮ ಪಂದ್ಯವನ್ನಾಡಲಿದ್ದಾರೆ.

ಮುಂಬೈ ತಂಡಕ್ಕೆ ಸೂಪರ್​ ಲೀಗ್​ ಹಂತದಲ್ಲಿ ಕೊನೆಯ ಎರಡು ಪಂದ್ಯಗಳು ಬಾಕಿ ಇದೆ. ಈ ಪಂದ್ಯಕ್ಕೆ ಮುಂಬೈ ತಮ್ಮ ತಂಡ 15ರ ಬಳಗವನ್ನು ಘೋಷಿಸಿದ್ದು, ಪೃಥ್ವಿ ಶಾ ಹೆಸರಿದೆ.ಅಸ್ಸೋಂ ವಿರುದ್ಧ ಮುಂಬೈ ತಂಡ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಕೊನೆಯ ಸೂಪರ್ ಲೀಗ್ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಪೃಥ್ವಿ ಶಾ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ಭರವಸೆ ಇದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions