ಮೈಸೂರು : ಜೂನ್ 21 ರಂದು ಮೈಸೂರಿಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗುವುದು ಬಹುತೇಕ ಖಚಿತಗೊಂಡಿದೆ.
ಜೂನ್ 21 ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುವುದು ಬಹುತೇಕ ಫಿಕ್ಸ್ ಆಗಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ.
Ration Card : ಪಡಿತರ ಚೀಟಿದಾರರೇ ಗಮನಿಸಿ : `ಇ-ಕೆವೈಸಿ’ ಮಾಡಿಸದಿದ್ರೆ ರೇಷನ್ ಸ್ಥಗಿತ!
ಸಂಸದ ಪ್ರತಾಪಸಿಂಹ ಅವರು ಯೋಗದಿನ ದಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರುವಂತೆ ಖುದ್ದ ದೆಹಲಿಗೆ ತೆರಳಿ ಆಹ್ವಾನಿಸಿದ್ದರು. ಇತ್ತ ಸ್ಥಳೀಯ ಶಾಸಕರೂ ಮೋದಿ ಅವರನ್ನು ಕರೆಯಲು ಪ್ರಯತ್ನಿಸುತ್ತಿದ್ದರು. ಕೇಂದ್ರದ ಆಯುಷ್ ತಂಡವೂ ಏ.29ರಂದು ಮೈಸೂರಿಗೆ ಭೇಟಿ ನೀಡಿ ಅಗತ್ಯ ವ್ಯವಸ್ಥೆಗಳನ್ನು ಪರಿಶೀಲಿಸಿ ಹೋಗಿತ್ತು. ಸದ್ಯ ಈ ಎಲ್ಲಾ ಪ್ರಯತ್ನ ಗಳಿಂದ ಮೈಸೂರಿಗೆ ಮೋದಿ ಬರುವುದು ಖಚಿತಗೊಂಡಿದೆ.
ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆ ಸಿದ್ಧತೆ ನಡೆಸಲಾಗಿದ್ದು, ಮೈಸೂರಿನ ಯೋಗ ದಿನಾಚರಣೆ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮೈಸೂರಿನ ವಿಜಯನಗರ ಯೋಗ ನರಸಿಂಗಸ್ವಾಮಿ ದೇವಾಸ್ಥಾನದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಾರಿ ಯೋಗಾ ದಿನಾಚರಣೆಯಲ್ಲಿ 2 ಲಕ್ಷ ಯೋಗಪಟುಗಳನ್ನು ಸೇರಿಸಲು ಸಿದ್ದತೆ ಕೈಗೊಳ್ಳಲಾಗಿದೆ.