ನವದೆಹಲಿ: ಅದು 13 ಬಾರಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ( Republic Day ) ಭಾಗವಹಿಸಿತ್ತು. 2003ರಲ್ಲಿ ರಾಷ್ಟ್ರಪತಿ ಅಂಗರಕ್ಷಕ ಪಡೆಯನ್ನು ಸೇರಿದ್ದ ಅದಕ್ಕೆ, ಇಂದಿನ ಗಣರಾಜ್ಯೋತ್ಸವ ಪರೇಡ್ ಕೊನೆಯದಾಗಿತ್ತು. ಅಂತಹ ಸೇವೆಸಲ್ಲಿಸಿ, ನಿವೃತ್ತಿಯಾಗುತ್ತಿದ್ದಂತ ಅದಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿಯವರು ಮುತ್ತಿಟ್ಟು, ಮುದ್ದಿಸಿ, ಆತ್ಮೀಯವಾಗಿ ಬೀಳ್ಗೊಟ್ಟರು. ಅಷ್ಟಕ್ಕು ಹಾಗೆ ಬೀಳ್ಗೊಡುಗೆ ಕೊಟ್ಟಿದ್ದು ಯಾವುದಕ್ಕೆ ಅಂತ ಮುಂದೆ ಓದಿ..
ಇಂದು 73ನೇ ಗಣರಾಜ್ಯೋತ್ಸವ ಪರೇಡ್ ಮುಕ್ತಾಯವಾಗುತ್ತಿದ್ದಂತೆ, ರಾಷ್ಟ್ರಪತಿ ರಾಮಾನಂದ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಾವು ಕುಳಿತಿದ್ದಂತ ಸ್ಥಳದಿಂದ ಪರೇಡ್ ರಸ್ತೆಗೆ ತೆರಳಿ, ಕುದುರೆಯೊಂದನ್ನು ಮುದ್ದಿಸಿ, ಮೈಸವರುತ್ತಿದ್ದರೇ, ಎಲ್ಲರ ಚಿತ್ತ ಅದರತ್ತಲಿತ್ತು.
ಹೀಗೆ ಆತ್ಮೀಯವಾಗಿ ಕುದುರೆಯನ್ನು ನೋಡುತ್ತಿದ್ದು ಬೇರೇನೂ ಕಾರಣಕ್ಕೆ ಅಲ್ಲ. 2003ರಲ್ಲಿ ರಾಷ್ಟ್ರಪತಿ ಅಂಗರಕ್ಷಕ ತಂಡವನ್ನು ಸೇರಿದ್ದಂತ ಕುದುರೆ ಅದಾಗಿತ್ತು. ಅದರ ಹೆಸರೇ ವಿರಾಟ್ ( President’s Bodyguard horse Virat ). ಆ ಕುದುರೆ 13 ವರ್ಷ ಸೇವೆ ಸಲ್ಲಿಸಿ, ಇಂದು ನಿವೃತ್ತಿಯಾಗಿತ್ತು. ಈ ಕುದುರೆಯ ಬಳಿಗೆ ತೆರಳಿದಂತ ರಾಷ್ಟ್ರಪತಿ ರಾಮಾನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿಯವರು ಮೈಸವರಿ, ಆತ್ಮೀಯವಾಗಿ ಬೀಳ್ಕೊಡಿಗೆ ನೀಡಲಾಯಿತು.
President’s Bodyguard horse Virat retires from service today. It was given the Chief of the Army Staff Commendation Medal this year.
President Kovind, PM Modi and Defence Minister Rajnath Singh bid him farewell on the occasion
(Pic source: President of India) pic.twitter.com/L7G2OTpJJn
— ANI (@ANI) January 26, 2022