ಸುಭಾಷಿತ :

Wednesday, April 8 , 2020 12:14 AM

ಬಿಗ್ ನ್ಯೂಸ್ : 16ನೇ ಲೋಕಸಭೆ ವಿಸರ್ಜನೆಗೆ ರಾಷ್ಟ್ರಪತಿ ಅಂಕಿತ


Saturday, May 25th, 2019 3:24 pm

ನವದೆಹಲಿ : 16ನೇ ಲೋಕಸಭೆ ವಿಸರ್ಜನೆಗೆ ರಾಷ್ರಪತಿ ರಾಮನಾಥ್ ಕೋವಿಂದ್ ಅಂಕಿತವನ್ನು ಹಾಕಿದ್ದಾರೆ. ಈ ಮೂಲಕ 16ನೇ ಲೋಕಸಭೆ ವಿಸರ್ಜನೆ ಗೊಂಡಿದ್ದು, ಕೇಂದ್ರದಲ್ಲಿ ಮತ್ತೆ ಮೋದಿ ಆಡಳಿತದ 17ನೇ ಲೋಕಸಭೆ ರಚನೆಯಾಗಲು ಸಜ್ಜಾಗಿದೆ.

ಇಂದ ಸಂಜೆ 4ಕ್ಕೆ ಎನ್ ಡಿ ಎ ನಾಯಕರ ಮಹತ್ವದ ಸಭೆ ನಡೆಯಲಿದ್ದು, ಸಭೆಯ ಬಳಿಕ ಸಂಜೆ 5ಕ್ಕೆ ಸೆಂಟ್ರಲ್ ಹಾಲ್ ನಲ್ಲಿ ಬಿಜೆಪಿ ಸಂಸದೀಯ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎನ್ ಡಿ ಎ ಅಧ್ಯಕ್ಷರ ಬಗ್ಗೆ ಚರ್ಚೆ ನಡೆಸಿ, ಅಧ್ಯಕ್ಷರ ಆಯ್ಕೆಯನ್ನು ಮಾಡಲಾಗುತ್ತದೆ.

ಬಿಜೆಪಿ ಸಂಸದೀಯ ಸದಸ್ಯರ ಸಭೆಯ ಬಳಿಕ, ಸಂಜೆ 7ಕ್ಕೆ ರಾಷ್ಟ್ಪಪತಿಗಳನ್ನು ಭೇಟಿ ಮಾಡಲಿರುವ ನರೇಂದ್ರ ಮೋದಿ, 17ನೇ ಲೋಕಸಭೆ ರಚನೆಯ ಹಕ್ಕನ್ನು ಮಂಡಿಸಲು ಅವಕಾಶ ಕೋರಲಿದ್ದಾರೆ. ಈ ಮೂಲಕ ದೇಶದಲ್ಲಿ ಕೇಂದ್ರದಲ್ಲಿ ಮತ್ತೆ ಮೋದಿ ಆಡಳಿತದ ಸರ್ಕಾರಕ್ಕೆ ನಾಂದಿ ಹಾಡಲಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions