ಹಾಸನ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇಂದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೊದಲು ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಲಾಗಿತ್ತು.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆಮಹಲ್ ನಲ್ಲಿ ಆರೋಪಿಗಳಾದಂತ ಮುಸ್ತಾಫಾ ಹಾಗೂ ಇಲ್ಯಾಸ್ ಎಂಬಾತನನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವಂತ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದರು.

ಇಂದು ವಿಚಾರಣೆಯ ಬಳಿಕ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಆರೋಪಿಗಳಾದಂತ ಮುಸ್ತಾಫಾ, ಇಲ್ಯಾಸ್ ನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ಆನೆಮಹಲ್ ನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವಂತ ಎಸ್ಐಟಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುತ್ತಿರೋದಾಗಿ ತಿಳಿದು ಬಂದಿದೆ.

ಅಂದಹಾಗೇ ಮುಸ್ತಾಫಾಗೆ ಶುಂಠಿ ಬೆಳೆಯೋದಕ್ಕೆ ಆಶ್ರಯ ನೀಡಿದ್ದಂತ ಸಿರಾಜ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಪಡೆಯೋದಕ್ಕಾಗಿ ಸಕಲೇಶಪುರ ಠಾಣೆಗೂ ಆತನನ್ನು ಕರೆದೊಯ್ಯಲಾಗಿದೆ ಎನ್ನಲಾಗುತ್ತಿದೆ.

‘ಅರವಿಂದ್ ಕೇಜ್ರಿವಾಲ್‌’ಗೆ ಮಧ್ಯಂತರ ಜಾಮೀನು: ಸುಪ್ರೀಂ ವಿಧಿಸಿದ ‘ಷರತ್ತು’ಗಳೇನು ಗೊತ್ತಾ? | Arvind Kejriwal bail

ಮುಸ್ಲಿಮರಿಗೆ ಉದ್ಯೋಗ ಮೀಸಲಾತಿ ನೀಡಲು ಕಾಂಗ್ರೆಸ್ ಪಿತೂರಿ: ಮೋದಿ

Share.
Exit mobile version