ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ( Praveen murder case ) ಸಂಬಂಧ ಇಂದು ಸಿಎಂ ಜೊತೆಗೆ ಎಲ್ಲಾ ರೀತಿಯ ಚರ್ಚೆ ನಡೆಸಲಾಗಿದೆ. ಪರಿಸ್ಥಿತಿಯ ಬಗ್ಗೆ ಡಿಜಿ ಪ್ರವೀಣ್ ಸೂದ್ ಎಲ್ಲಾ ಮಾಹಿತಿಯನ್ನು ನೀಡಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ (Home Minister Araga Jnanendra ) ತಿಳಿಸಿದ್ದಾರೆ.

ಶಿವಮೊಗ್ಗ: ನಾಳೆ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

ಇಂದು ಸಿಎಂ ಬೊಮ್ಮಾಯಿ ಸಭೆಯ ಬಳಿಕ ಮಾತನಾಡಿದಂತ ಅವರು, ರಿವೀವ್ ಮಾಡಿದ್ದೇವೆ. ಪ್ರವೀಣನ ಅಂತ್ಯಕ್ರಿಯೆ ಸ್ವಲ್ಪ ಹೊತ್ತಲ್ಲೇ ನಡೆಯಲಿದೆ. ಈ ಬಗ್ಗೆ ಎಷ್ಟು ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂಬುದಾಗಿ ಡಿಜಿಯವರು ವಿವರಿಸಿದ್ದಾರೆ. ಶಾಂತಿ-ಸುವ್ಯವಸ್ಥೆ ಕಾಪಾಡಲಾಗುತ್ತದೆ. ಅಪರಾಧಿಗಳನ್ನು ಬಂಧಿಸಲಾಗುತ್ತದೆ. ಕೇರಳಕ್ಕೂ ಪೊಲೀಸರು ತೆರಳಿದ್ದಾರೆ. ಈ ತುರ್ತು ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ. ಪೊಲೀಸರು ಸುಮಾರು 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದರು.

BIG NEWS: ಸಂಸತ್ ಸಂಕೀರ್ಣದ ಬಳಿಯಲ್ಲಿ 50 ಗಂಟೆಗಳ ಸುದೀರ್ಘ ಪ್ರತಿಭಟನೆ ಆರಂಭಿಸಿದ ಅಮಾನತುಗೊಂಡ ರಾಜ್ಯಸಭಾ ಸಂಸದರು

ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ನಾವು ಯಾವುದೇ ಕೇಸ್ ನಲ್ಲಿ ಆರೋಪಿಗಳನ್ನು ಬಿಟ್ಟಿಲ್ಲ. ಹಿಂದಿನ ಸರ್ಕಾರದಲ್ಲಿ ಅನೇಕರನ್ನು ಹಿಡಿದು, ಕೆಲವರನ್ನು ಬಿಟ್ಟಿದ್ದಾರೆ. ನಾವು ಗಂಭೀರವಾಗಿ ಪ್ರಕರಣ ಪರಿಗಣಿಸಿ ಒಂದೆರಡು ದಿನಗಳಲ್ಲಿ ಅಪರಾಧಿಗಳನ್ನು ಬಂಧಿಸಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಈ ರೀತಿಯ ಹತ್ಯೆಗಳು ಬಹಳಷ್ಟು ದಿನಗಳಿಂದ ನಡೆಯುತ್ತಿದೆ ಎಂದು ತಿಳಿಸಿದರು.

BIGG NEWS : ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಸಿಹಿಸುದ್ದಿ : `ಶುಭ ಲಗ್ನ’ ಸಾಮೂಹಿಕ ವಿವಾಹ ಯೋಜನೆಗೆ ಚಿಂತನೆ!

Share.
Exit mobile version