ನವದೆಹಲಿ: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವಂತ 2022 ಕಾಮನ್ವೆಲ್ತ್ ಪವರ್ಲಿಫ್ಟಿಂಗ್ ಮತ್ತು ಬೆಂಚ್ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ( 2022 Commonwealth Powerlifting and Benchpress Championships ) ಭಾರತದ ಕುಮಾರಿ ಪ್ರತಿಕ್ಷಾ ಜಿ ನಾಯಕ್ ಭಾಗವಹಿಸಿದ್ದರು. ಅವರು ಇದೀಗ ಜೂನಿಯರ್ ಕ್ಲಾಸ್ –  ಬೆಂಚ್ಪ್ರೆಸ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ನವೆಂಬರ್ 28 ರಿಂದ ಡಿಸೆಂಬರ್ 4ರವರೆಗೆ ನ್ಯೂಜಿಲೆಂಡ್ ನಲ್ಲಿ 2022 ಕಾಮನ್ವೆಲ್ತ್ ಪವರ್ಲಿಫ್ಟಿಂಗ್ ಮತ್ತು ಬೆಂಚ್ಪ್ರೆಸ್ ಚಾಂಪಿಯನ್ ಶಿಪ್ ಕ್ರೀಡಾಕೂಟ ನಡೆಯುತ್ತಿದೆ. ಈ ಕ್ರೀಡಾಕೂಟದಲ್ಲಿ ಭಾರತವನ್ನು ಕುಮಾರಿ ಪ್ರತಿಕ್ಷಾ ಜಿ ನಾಯಕ್ ಪ್ರತಿನಿಧಿಸಿ ಭಾಗಿಯಾಗಿದ್ದರು. ಅವರೀಗ ಜೂನಿಯರ್ ಕ್ಲಾಸ್ ಸುಸಜ್ಜಿತ ಬೆಂಚ್ಟ್ರೆಸ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಅಂದಹಾಗೇ, ಇವರಿಗೆ ಹೂವಿನಹೊಳೆ ಪ್ರತಿಷ್ಠಾನದ ( Hoovinahole Foundation ) ಮೂಲಕ ಸಿ ಎಸ್ ಆರ್ ಸಹಯೋಗದ ಅಡಿಯಲ್ಲಿ ಟೆಕ್ ಸಿಸ್ಟಮ್ ಗ್ಲೋಬಲ್ ಸರ್ವಿಸಸ್ ಕಂಪನಿಯಿಂದ ಪ್ರೋತ್ಸಾಹ ನೀಡಿತ್ತು.

ಅಂದಹಾಗೇ ಹೂವಿನಹೊಳೆ ಪ್ರತಿಷ್ಠಾನ(ನೋ)ವು, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಸಂಸ್ಥೆಯಾಗಿದೆ. ವಿವಿಧ ದಾನಿಗಳ ನೆರವಿನೊಂದಿಗೆ ಈಗಾಗಲೇ ಹೂವಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನುವಂತೆ ಸುಸಜ್ಜಿತ ಕಂಪ್ಯೂಟರ್ ಸ್ಕಿಲ್ ಸೆಂಟರ್ ಆರಂಭಿಸಲಾಗಿದೆ.

ಇದಷ್ಟೇ ಅಲ್ಲದೇ ವಿವಿಧ ಶಾಲೆಗಳಿಗೆ ಅಗತ್ಯವಿರುವಂತ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿಯನ್ನು ದಾನಿಗಳ ನೆರವಿನೊಂದಿಗೆ ಮಾಡುತ್ತಿದೆ.  ನೀವು ಹೂವಿನಹೊಳೆ ಪ್ರತಿಷ್ಠಾನದೊಂದಿಗೆ ಕೈಜೋಡಿಸಿ, ಭಾಗಿಯಾಗಲೂ ನಿಮ್ಮ ನೆರವನ್ನು 8088081008ಗೆ ಗೂಗಲ್ ಪೇ, ಪೋನ್ ಪೇ ಮೂಲಕ ಕಳುಹಿಸಬಹುದಾಗಿದೆ. ಈ ಮೂಲಕ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ನೆರವಾಗಿ ಎಂಬುದಾಗಿ ಸಂಸ್ಥೆ ಕೋರಿದೆ. ಹೆಚ್ಚಿನ ಮಾಹಿತಿಗಾಗಿ https://hoovinahole.com/ ಗೆ ಭೇಟಿ ನೀಡಿ ಪಡೆಯಬಹುದಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ

Share.
Exit mobile version