ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಕೇಸ್ : ದಾಖಲೆ ಕೊಡ್ತೀನಿ ಎಂದು ಪೊಲೀಸರಿಗೆ ಪ್ರಶಾಂತ್ ಸಂಬರಗಿ ಹಾರಿಸಿದ್ರಾ ಕಾಗೆ..? – Kannada News Now


State

ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಕೇಸ್ : ದಾಖಲೆ ಕೊಡ್ತೀನಿ ಎಂದು ಪೊಲೀಸರಿಗೆ ಪ್ರಶಾಂತ್ ಸಂಬರಗಿ ಹಾರಿಸಿದ್ರಾ ಕಾಗೆ..?

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ನಟಿ ಸಂಜನಾ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇದ್ದಾರೆ. ಡ್ರಗ್ಸ್ ಮಾಫಿಯಾದಲ್ಲಿ ಹಲವು ನಟ ನಟಿಯರು ಭಾಗಿಯಾಗಿದ್ದಾರೆ, ಈ ಬಗ್ಗೆ ದಾಖಲೆಗಳನ್ನು ನೀಡುವುದಾಗಿ ಸಂಬರಗಿ ಹೇಳಿದ್ದರು. ಆದರೆ ಇದೀಗ ನನ್ನ ಬಳಿ ಯಾವುದೇ ದಾಖಲೆ ಇಲ್ಲ ಎಂದು ಪ್ರಶಾಂತ್ ಸಂಬರಗಿ ಪೊಲೀಸರಿಗೆ ಕಾಗೆ ಹಾರಿಸಿದ್ದಾರೆ.

ಸದ್ಯಕ್ಕೆ ನನ್ನ ಹತ್ರ ಯಾವುದೇ ದಾಖಲೆ ಇಲ್ಲ ಎಂದು ಸಿಸಿಬಿ ಪೊಲೀಸರ ‌ಮುಂದೆ ಪ್ರಶಾಂತ್ ಸಂಬರಗಿ ಸೈಲೆಂಟ್ ಆಗಿದ್ದಾರೆ. ಸಂಜನಾ ಸಿನಿಮಾ ಲಿಸ್ಟ್, ಇಡ್ಕೊಂಡು ಸಂಬರ್ಗಿ ಬಂದಿದ್ದು, ಬರೇ ಖಾಲಿ ಫೈಲ್ ಇಡ್ಕೊಂಡು ಬಂದಿದ್ದನ್ನು ನೋಡಿ ಪೊಲೀಸರು ಗರಂ ಆಗಿದ್ದಾರೆ.

ನೀನು ತೋರಿಸಿದ ಎಲ್ಲಾ ದಾಖಲೆಗಳು ನಮ್ಮ ಹತ್ರ ಕೂಡ ಇದಾವೆ..ಇದನ್ನು ಬಿಟ್ಟು ಬೇರೆ ಏನಿದೆ ಹೇಳಿ ಎಂದು ಮಾಧ್ಯಮಗಳ ಮುಂದೆ ಪೋಸ್ ಕೊಡೋದಲ್ಲ ಅಂತಾ ಗರಂ ಪೊಲೀಸರು ಗರಂ ಆಗಿದ್ದಾರೆ. ಬಳಿಕ ದಾಖಲೆ ಸಮೇತ ಶುಕ್ರವಾರ ಬರ್ತಿನಿ ಹೋದ ಸಂಬರ್ಗಿ ಎದ್ದುಹೋಗಿದ್ದಾರೆ. ಶುಕ್ರವಾರ ಬರೋಕೆ ನಾವು ಯಾವುದೇ ನೋಟಿಸ್ ಕೊಟ್ಟಿಲ್ಲ, ಕೊಡೋದು ಇಲ್ಲ.. ಸಿಸಿಬಿ ಪೊಲೀಸರ ಪ್ರಶ್ನೆ ಗೆ ಗಲಿಬಿಲಿಗೊಂಡ ಸಂಬರ್ಗಿ ಸೈಲೆಂಟ್ ಆಗಿ ಎದ್ದು ಬಂದಿದ್ದಾರೆ.

ನಾಳೆ NEET ಪರೀಕ್ಷೆ: ಕೊರೊನಾ ಕಟ್ಟುನಿಟ್ಟಿನ ಕ್ರಮಗಳ ನಡುವೆ ಪರೀಕ್ಷೆ ಬರೆಯಲಿದ್ದಾರೆ 15 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು..!




error: Content is protected !!