ಕೆಎನ್‌ಎನ್‌ಸಿನಿಮಾಡೆಸ್ಕ್: ಸಿನೆಮಾ ಅಂದ್ರೆ ಅದು ಮನರಂಜನೆ ಮಾತ್ರವಲ್ಲ. ಜನರನ್ನ ಬಹುಬೇಗ ತಲುಪುವ ಮಾಧ್ಯಮವೂ ಹೌದು. ಹಾಗಾಗಿ ಕಂಟೆಂಟ್ ಓರಿಯಂಟೆಡ್,ಜಾಗೃತಿ ಮೂಡಿಸುವ ಹಾಗು ಉತ್ತಮ ಕಥಾ ಹಂದರದ ಚಿತ್ರಗಳು ಹೆಚ್ಚಾಗಿ ಗೆಲ್ಲುತ್ತಿವೆ. ಅದ್ರಲ್ಲೂ ನಮ್ಮ ಸುತ್ತ ಮುತ್ತಲಿನ ವಿದ್ಯಮಾನಗಳ ಕುರಿತ ಜಾಗೃತಿ ಚಿತ್ರಗಳಂತೂ ಸೋತದ್ದು ಕಡಿಮೆ. ಈಗ ಯಾಕೀ ವಿಷಯ ಅಂದ್ರೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ “ಪ್ರಭುತ್ವ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಮತದಾನದ ಮಹತ್ವ ಮತ್ತು ಪ್ರಜಾಪ್ರಭುತ್ವ ದ ಬಗ್ಗೆ ಸಂದೇಶ ಸಾರುವ ಪ್ರಭುತ್ವ ಟ್ರೈಲರ್ ನೋಡಿದವರೆಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.
ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ವೋಟೆಂಬ ಅಸ್ತ್ರ ಪಡೆದು ಗೆದ್ದ ನಂತರದ ರಾಜಕಾರಣಿಗಳ ಕರಾಳ ಮುಖ,ಹಣದ ಆಸೆ,ಹೆಣ್ಣು,ಗಣಿಗಾರಿಕೆ,ನಾಟಕೀಯ ವರ್ಗ ಒಂದೆಡೆಯಾದ್ರೆ ಜನರಿಗಾಗಿ ತುಡಿಯೋ ಮನಸಿನ ಇನ್ನೊಂದಿಷ್ಟು ಪಾತ್ರಗಳ ಪರಿಚಯದ ಜಲಕ್ ಬಂದು ಹೋಗತ್ತೆ. ಪ್ರತೀ ಪಾತ್ರ,ಸಂಭಾಷಣೆ,ಪೈಟ್ ಸೀನ್ ಗಳು ಪ್ರಭುತ್ವ ಚಿತ್ರ ದ ಮೇಲಿನ ಕ್ಯುರಿಯಾಸಿಟಿನ ಹೆಚ್ಚಿಸುವಂತಿವೆ.ಟ್ರೇಲರನ್ನು ರಾಜಕೀಯ ಮುಖಂಡರಾದ ರವೀಂದ್ರ ಅನಾವರಣ ಮಾಡಿದರು. ಜಂಕಾರ್ ಮ್ಯೂಸಿಕ್ ಯೂ ಟ್ಯೂಬ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದ್ದು ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ನಿರ್ದೇಶಕ ಆರ್ ರಂಗನಾಥ್, ನಿರ್ದೇಶನದ ಪ್ರಭುತ್ವ ಕ್ಕೆ ಚೇತನ್ ಚಂದ್ರ ನಾಯಕರಾಗಿ ನಟಿಸಿದ್ದು , ಪಾವನ ನಾಯಕಿ ನಟಿಸಿದ್ದಾರೆ. ಇಬ್ಬರೂ ತಮ್ಮ ತಮ್ಮ ಪಾತ್ರದ ಕುರಿತು ಹಾಗು ಚಿತ್ರ ತಂಡದ ಶ್ರಮದ ಕುರಿತು ಮಾತನಾಡಿದ್ರು. ಚಿತ್ರದ ಕಥಾಹಂದರದ ಕುರಿತು ಹೇಳಿದ ನಿರ್ದೇಶಕರು ಚಿತ್ರ ಅಂದುಕೊಂಡಂತೆ ಮೂಡಿ ಬರಲು ಸಹಕರಿಸಿದ ತಂಡಕ್ಕೆ ಧನ್ಯವಾದ ಹೇಳಿದ್ರು. ಮತದಾನ ಅಮೂಲ್ಯವಾದ್ದದ್ದು.ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಮೇಘಡಹಳ್ಳಿ ಡಾ||ಶಿವಕುಮಾರ್ ಚಿತ್ರದ ಕುರಿತು ತಮ್ಮ ಅಭಿಪ್ರಾಯ ವನ್ನ ಹಂಚಿಕೊಂಡರು. ಸದ್ಯ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚುನಾವಣೆ ಮುಂಚೆಯೇ ಚಿತ್ರವನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರವಿರಾಜ್ ಎಸ್ ಕುಮಾರ್ ತಿಳಿಸಿದರು.
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಭುತ್ವ ಚಿತ್ರದಲ್ಲಿ ನಟಿಸಿರುವ ಅರವಿಂದ್ ರಾವ್, ಹರೀಶ್ ರಾಯ್, ಆದಿ ಲೋಕೇಶ್, ವಿಜಯ್ ಚೆಂಡೂರ್, ವೀಣಾ ಸುಂದರ್, ಅನಿತಾ ಭಟ್ ಮುಂತಾದ ಕಲಾವಿದರು ಹಾಗೂ ಸಂಭಾಷಣೆ ಬರೆದಿರುವ ವಿನಯ್ “ಪ್ರಭುತ್ವ” ಚಿತ್ರದ ಕುರಿತು ಮಾತನಾಡಿದರು.
ಇನ್ನುಳಿದಂತೆ ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಚೇತನ್ ಚಂದ್ರ, ಪಾವನ, ನಾಸರ್, ಶರತ್ ಲೋಹಿತಾಶ್ವ, ಆದಿ ಲೋಕೇಶ್, ಅರವಿಂದ್ ರಾವ್, ಹರೀಶ್ ರಾಯ್, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಜೇಶ್ ನಟರಂಗ, ಅನಿತಾ ಭಟ್ ಮುಂತಾದ ತಾರಾಗಣವಿದ್ದು ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲೇ ಇವರ ಪಾತ್ರದ ಸಣ್ಣ ಜಲಕ್ ತೋರಿಸಲಾಗಿದೆ. ಒಟ್ಟಾರೆ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿರುವ ಪ್ರಭುತ್ವ ಚಿತ್ರ ಮತದಾನ ಬಗ್ಗೆ ಜಾಗೃತಿ ಮೂಡಿಸುವ , ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವಾಗಿರೋದಂತು ನಿಜ.