ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಸೀಗೆ ಹುಣ್ಣಿಮೆ ದಿನ ರೈತರೊಬ್ಬರು ತಮ್ಮ ಹೊಲದಲ್ಲಿ ಪುನೀತ್ ರಾಜ್ ಕುಮಾರ್  ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿ ರೈತರೊಬ್ಬರು ಪುನೀತ್ ರಾಜ್‌ಕುಮಾರ್ (Puneeth Rajkumar)  ಭಾವಚಿತ್ರ ಇಟ್ಟು ಹೊಲದಲ್ಲಿ ಪೂಜೆ ಮಾಡಿದ್ದಾರೆ. ರೈತರು ಮಾಡಿರುವ ಈ ಕೆಲಸ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಬನ್ನಿ ಮರದ ಕಳಗೆ ಅಡುಗೆ ಮಾಡಿ ಎಡೆ ಇಟ್ಟು ಅದರ ನಡುವೆ ಪುನೀತ್ ಭಾವಚಿತ್ರ ಇಟ್ಟು ಪೂಜಿಸಿದ್ದಾರೆ.

ಹಳ್ಳಿಯ ರೈತರಿಗೆ ಭೂಮಿ ತಾಯಿಯೇ ಒಂಥರಾ ಜೀವಾಳ. ಆಕೆಯೇ ಪ್ರತಿಯೊಬ್ಬರು ಪೂಜೆಸುತ್ತಾರೆ. ಆಕೆ ಇಲ್ಲ ಅಂದರೆ ಹೊಟ್ಟೆಗೆ ಅನ್ನನೂ ಇರೋದಿಲ್ಲ. ಅದಕ್ಕೆ ಅಂತಾನೇ ಹಬ್ಬವೊಂದನ್ನ ಮೀಸಲು ಇಟ್ಟಿರುತ್ತಾರೆ. ಅದನ್ನ ಸೀಗೆ/ಸೀಗಿ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಅಂತಲೂ ಕರೆಯುತ್ತಾರೆ.

 

 ಆದರೆ ಈ ಹಬ್ಬದ ಆರಚಣೆ ಒಂದೊಂದು ಊರಿನಲ್ಲಿ  ಒಂದೊಂದು ಥರ ಮಾಡುತ್ತಾರೆ. ಭಾರತೀಯ ಕೃಷಿ ಪರಂಪರೆಯಲ್ಲಿ ಕೃಷಿ ಭೂಮಿಯನ್ನು ತಾಯಿಯೆಂದೇ ಪರಿಗಣಿಸಲಾಗುತ್ತದೆ.ಹಳ್ಳಿಯಲ್ಲೂ ಅಂತು ಈ ಹಬ್ಬ ತುಂಬ ಗಮ್ಮತ್ತು ಆಗಿರುತ್ತದೆ.  ಕರ್ನಾಟಕದಲ್ಲಿ ಈ ಹುಣ್ಣಿಮೆಯ ಆಚರಣೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ನಾಳೆ ನಾಡಿನಾದ್ಯಂತ ಭೂಮಿ ಹುಣ್ಣಿಮೆಯ ಸಂಭ್ರಮ ಮನೆ ಮಾಡಿದೆ.

ಏನಿದು ಸೀಗೆ ಹುಣ್ಣಿಮೆ?
ಎಲ್ಲವನ್ನೂ ಕರುಣಿಸುವ ಭೂಮಿತಾಯಿಗೆ ಸೀಗೆ ಹುಣ್ಣಿಮೆ ದಿನದಂದು ಚರಗ ಚೆಲ್ಲುವ ಮೂಲಕ ಆಕೆಯನ್ನು ಸಂತುಷ್ಟಪಡಿಸುವ ದಿನ ಎಂದು ಕರೆಯಲಾಗುತ್ತದೆ. ಮತ್ತೊಂದು ಕಡೆ ಇದು ಭೂಮಿ ತಾಯಿಗೆ ಸೀಮಂತದ ಕ್ಷಣವೂ ಎಂದೂ ಹೇಳಲಾಗುತ್ತದೆ
ಹೊಲದ ಮುಖ್ಯಭಾಗದಲ್ಲಿ ಸೀಗೆ ಹುಣ್ಣಿಮೆಯ ಹಿಂದಿನ ದಿನವೇ ಪಾಂಡವರನ್ನು ಪ್ರತಿಷ್ಟಾಪಿಸಲಾಗುತ್ತೆ. ಕಳ್ಳನ ಕಲ್ಲು ಎಂದೂ ಇನ್ನೊಂದು ಕಲ್ಲನ್ನು ಇರಿಸಲಾಗುತ್ತದೆ. ಐದು ಕಲ್ಲುಗಳನ್ನು ಕ್ರಮವಾಗಿ ಹೊಂದಿಸಿ, ಅವುಗಳನ್ನೇ ಪಂಚ ಪಾಂಡವರು ಎಂಬರ್ಥದಲ್ಲಿ ಪೂಜಿಸಲಾಗುತ್ತದೆ. ಆ ಕಲ್ಲುಗಳಿಗೆ ಸುಣ್ಣ ಬಳಿದು, ಕೆಮ್ಮಣ್ಣಿನ ಚುಕ್ಕೆ ಇಡಲಾಗುತ್ತದೆ. ಮಾರನೇ ದಿನ ಅವುಗಳ ಪೂಜೆ ಮಾಡಲಾಗುತ್ತದೆ.

BREAKING NEWS : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ದಿನ ಧಾರಾಕಾರ ‘ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ |Karnataka Weather Report

Good News ; ಪ್ರತಿಷ್ಠಿತ ‘ವುಡನ್ ಸ್ಟ್ರೀಟ್ ಕಂಪನಿ’ಯಲ್ಲಿ 3,000 ಜನರಿಗೆ ಉದ್ಯೋಗಾವಕಾಶ

Share.
Exit mobile version