ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಆಗಸ್ಟ್ 10, ಆಗಸ್ಟ್ 11 ಮತ್ತು ಆಗಸ್ಟ್ 13 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಒಂದೇ ಹಾಡಿಗೆ ʻತಾಯಿ-ಮಗಳ ʼ ಸಖತ್‌ ಸ್ಟೆಪ್ಸ್‌ : ವಿಡಿಯೋ ಕಂಡ ʻ ನೆಟ್ಟಿಗರಿಂದ ಭರ್ಜರಿ ಶ್ಲಾಘನೆ ʼ | watch viral video

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕೇಬಲ್ ಪರಿವರ್ತನೆ ಕೆಲಸ ಮತ್ತು ಇತರ ನಿರ್ವಹಣಾ ಯೋಜನೆಗಳಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಮಾಡಿದ ನಿರ್ವಹಣಾ ಕಾರ್ಯದ ಪರಿಣಾಮವಾಗಿ ನಗರದ ಹಲವಾರು ಭಾಗಗಳು ಈಗಾಗಲೇ ವಿದ್ಯುತ್ ಸ್ಥಗಿತದಿಂದ  ತೊಂದರೆಯಾಗಿದೆ. ಕೇಬಲ್ ಗಳ ಚಾರ್ಜಿಂಗ್, ಮರ ಕಡಿಯುವುದು, ಟ್ರಾನ್ಸ್ ಫಾರ್ಮರ್ ಕೆಲಸ ಮತ್ತು ಮಾಸ್ಟರ್ ಟೆಸ್ಟಿಂಗ್ ಸೇರಿದಂತೆ ಇಲಾಖೆಯ ನಿರ್ವಹಣಾ ಕಾರ್ಯಗಳಿಂದಾಗಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.

ಒಂದೇ ಹಾಡಿಗೆ ʻತಾಯಿ-ಮಗಳ ʼ ಸಖತ್‌ ಸ್ಟೆಪ್ಸ್‌ : ವಿಡಿಯೋ ಕಂಡ ʻ ನೆಟ್ಟಿಗರಿಂದ ಭರ್ಜರಿ ಶ್ಲಾಘನೆ ʼ | watch viral video

ಆಗಸ್ಟ್ 10 ರಂದು ಪ್ರದೇಶಗಳ ಪಟ್ಟಿ
ಜಕ್ಕಸಂದ್ರ, ಎಚ್ಎಸ್ಆರ್ 5ನೇ ಸೆಕ್ಟರ್, ಟೀಚರ್ಸ್ ಕಾಲೋನಿ, ವೆಂಕಟಾಪುರದ ಕೆಲವು ಭಾಗಗಳು, ಸಲಾರ್ಪುರಿಯಾ ಗ್ರೀನೇಜ್ ಅಪಾರ್ಟ್ಮೆಂಟ್ಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಆಗಸ್ಟ್ 11 ರಂದು ಪ್ರದೇಶಗಳ ಪಟ್ಟಿ
ಇಲೆಕ್ಟ್ರಾನಿಕ್ಸ್ ಸಿಟಿ 2ನೇ ಹಂತ, ವೀರಸಂದ್ರ, ಅನಂತ ನಗರ, ದೊಡ್ಡನಾಗಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳು

ಆಗಸ್ಟ್ 13 ರಂದು ಪ್ರದೇಶಗಳ ಪಟ್ಟಿ
ಇಲೆಕ್ಟ್ರಾನಿಕ್ಸ್ ಸಿಟಿ ಹಂತ 2, ವೀರಸಂದ್ರ, ಅನಂತ ನಗರ, ದೊಡ್ಡನಾಗಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳು  ಕರೆಂಟ್‌ ಇರೋದಿಲ್ಲ

Share.
Exit mobile version