ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಡಿ ( Goods and Services Tax – GST ) ವಿದ್ಯುತ್ ( Electricity under GST ) ತರಲು ತಾನು ಒಲವು ತೋರುತ್ತೇನೆ ಎಂದು ವಿದ್ಯುತ್ ಸಚಿವಾಲಯ ( Power Ministry ) ಹಣಕಾಸು ಸಚಿವಾಲಯಕ್ಕೆ ತಿಳಿಸಿದೆ. ಜಿಎಸ್ಟಿ ಅಡಿಯಲ್ಲಿ ವಿದ್ಯುತ್ ತಂದ್ರೇ.. ಗ್ರಾಹಕರಿಗೆ ವಿದ್ಯುತ್ ದರವನ್ನು ( Electricity Tariff ) ಕಡಿಮೆ ಮಾಡಲು ಸಹಾಯ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಆದ್ರೇ.. ವಿದ್ಯುತ್ ಬಿಲ್ ಕೂಡ ಜಿಎಸ್ಟಿ ವ್ಯಾಪ್ತಿಗೆ ಬಂದು, ಜನಸಾಮಾನ್ಯರಿಗೆ ಮತ್ತೊಂದು ವಿದ್ಯುತ್ ಗೂ ಜಿಎಸ್ಟಿ ಪಾವತಿ ಹೊರೆ ಬೀಳಲಿದೆ.
BIGG NEWS: ರಾಜ್ಯದಲ್ಲಿ ಮತ್ತೆ ‘ಲಾಕ್ ಡೌನ್’ ಜಾರಿ.? ಸುಳಿವು ನೀಡಿದ ಕಂದಾಯ ಸಚಿವರು | Karnataka Lockdown
ವಿದ್ಯುತ್ ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ವೆಚ್ಚಗಳಿಗೆ ಕಡಿವಾಣ ಹಾಕೋದಕ್ಕೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿದ್ಯುತ್ ಅನ್ನು ಕೂಡ ಜಿಎಸ್ಟಿ ಅಡಿಯಲ್ಲಿ ಸೇರ್ಪಡೆ ಮಾಡೋದಕ್ಕೆ ಕೇಂದ್ರ ವಿದ್ಯುತ್ ಸಚಿವಾಲಯ ಮುಂದಾಗಿದೆ.
ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯಕ್ಕೆ ವಿದ್ಯುತ್ ಸಚಿವಾಲಯ ತಿಳಿಸಿದ್ದು, ವಿದ್ಯುತ್ ಬಳಕೆದಾರರಿಗೆ ಹೆಚ್ಚುವರಿ ಹೊರೆಯನ್ನು ತಪ್ಪಿಸೋ ಸಲುವಾಗಿ ವಿದ್ಯುತ್ ಅನ್ನು ಜಿಎಸ್ಟಿ ಅಡಿಯಲ್ಲಿ ತರೋ ಯೋಜನೆ ಇದೆ ಎಂಬುದಾಗಿ ತಿಳಿಸಿದೆ.
BIGG NEWS: ಜ.18ರವರೆಗೆ ರಾಜ್ಯಾದ್ಯಂತ ‘ಯುವ ಸಪ್ತಾಹ’ ಆಚರಿಸಿ – ರಾಜ್ಯ ಸರ್ಕಾರ ಆದೇಶ | Yuva Saptah
ಪ್ರಸ್ತುತ ವಿದ್ಯುತ್, ಪೆಟ್ರೋಲ್, ಡೀಸೆಲ್, ಜೆಟ್ ಇಂಧನ, ತಂಬಾಕು ಮತ್ತು ಭೂಮಿ 2017ರಲ್ಲಿ ಜಾರಿಗೆ ಬಂದ ಪರೋಕ್ಷ ತೆರಿಗೆಯ ವ್ಯಾಪ್ತಿಯಿಂದ ಹೊರಗಿವೆ. ಇದರಲ್ಲಿ ವಿದ್ಯುತ್ ಅನ್ನು ಜಿಎಸ್ಟಿ ಅಡಿಯಲ್ಲಿ ತರೋ ಚಿಂತನೆ ನಡೆಸಿರುವಂತ ವಿದ್ಯುತ್ ಸಚಿವಾಲಯ, ವಿವಿಧ ರಾಜ್ಯಗಳಲ್ಲಿ ವಿವಿಧ ತೆರಿಗೆಯನ್ನು ವಿದ್ಯುತ್ ಮೇಲೆ ವಿಧಿಸೋದಕ್ಕೆ ಕಡಿವಾಣ ಹಾಕಿ, ಗ್ರಾಹಕರಿಗೆ ಬಿಲ್ ಹೊರ ಇಳಿಸೋದಕ್ಕೆ ಮುಂದಾಗಿದೆ ಎಂದು ಹೇಳುತ್ತಿದೆ.
ಆದ್ರೇ.. ವಿದ್ಯುತ್ ಕೂಡ ಜಿಎಸ್ಟಿ ವ್ಯಾಪ್ತಿ ಅಡಿಗೆ ಬಂದ್ರೇ.. ವಿದ್ಯುತ್ ಬಳಕೆದಾರರು ಬಂದಂತ ಬಿಲ್ ಜೊತೆಗೆ ಜಿಎಸ್ಟಿಯನ್ನು ಹೆಚ್ಚುವರಿಯಾಗಿ ಪಾವತಿ ಮಾಡಬೇಕಿದೆ ಎನ್ನಲಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಮತ್ತೊಂದು ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ. ಆದ್ರೇ.. ವಿದ್ಯುತ್ ಅನ್ನು ಜಿಎಸ್ಟಿ ಅಡಿಗೆ ಸೇರಿಸಬೇಕಾದ್ರೇ.. ಮೊದಲು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಅದಕ್ಕೇ ಎಲ್ಲಾ ರಾಜ್ಯಗಳು ಸಮ್ಮತಿ ಕೂಡ ಪಡೆಯಬೇಕಿದೆ. ಆ ಸಮ್ಮತಿ ದೊರೆತು, ವಿದ್ಯುತ್ ಜಿಎಸ್ಟಿ ಅಡಿಯಲ್ಲಿ ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ.
BIG BREAKING NEWS: ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರೀ ಏರಿಕೆ : 284 ಸಾವು | Covid Cases In India