ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಕ.ವಿ.ಪ್ರ.ನಿ.ನಿ.ರವರ ಕೋರಿಕೆಯ ಮೇರೆಗೆ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಮಾರ್ಚ್, 19 ರಂದು ಬೆಳಗ್ಗೆ 11 ರಿಂದ ಸಂಜೆ 3 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯ ಗ್ರಾಹಕರು/ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಕೃಷಿಯಲ್ಲಿ ಡ್ರೋನ್ ಬಳಕೆ ಕುರಿತು ಪ್ರಾತ್ಯಕ್ಷಿಕೆ
ಮಡಿಕೇರಿ : ಆಧುನಿಕ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನವನ್ನು ಬಳಸಿ ಕೀಟನಾಶಕಗಳು ಮತ್ತು ಬೆಳೆ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಹಾಗು ನಿಖರವಾಗಿ ಸಿಂಪಡಿಸುವಿಕೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸಬಹುದು. ಡ್ರೋನ್ ಬಳಸಿ ಸಿಂಪಡಿಸುವ ಮೂಲಕ ಕೃಷಿ ಇನ್ಪುಟ್ಗಳ ಅತ್ಯುತ್ತಮ ಬಳಕೆ, ಶ್ರಮ, ಸಮಯವನ್ನು ಉಳಿಸಲು ಮತ್ತು ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ರೈತರಿಗೆ ಪ್ರಯೋಜನಕಾರಿಯಾಗಿದೆ.
ಈ ನಿಟ್ಟಿನಲ್ಲಿ ರೈತರ ಅನುಕೂಲಕ್ಕಾಗಿ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಅಪ್ಪಂಗಳ ಪ್ರಾದೇಶಿಕ ಕೇಂದ್ರದಿಂದ ಕೃಷಿಯಲ್ಲಿ ಡ್ರೋನ್ ಬಳಕೆಯ ಕುರಿತು ಸರಣಿ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ಮಾರ್ಚ್, 15 ರಂದು ಮೊದಲು ಪ್ರಾತ್ಯಕ್ಷಿಕೆಯನ್ನು ಅಪ್ಪಂಗಳದ ಪ್ರಾದೇಶಿಕ ಕೇಂದ್ರದಲ್ಲಿ ಮಾಡಲಾಯಿತು. ಅಲ್ಲಿ ರೈತರು ಏಲಕ್ಕಿಯಲ್ಲಿ ಸೂಕ್ಷ್ಮ ಪೆÇೀಷಕಾಂಶಗಳನ್ನು ಸಿಂಪಡಿಸುವುದನ್ನು ವೀಕ್ಷಿಸಿದರು. ನಂತರ ಬಿಟಿಗುಂಡಿ ಎಸ್ಟೇಟ್ನಲ್ಲಿ ಕಾಫಿ ಬೆಳೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಯಿತು.
ನಂತರ ಹಾಕತ್ತೂರು ಕುಮಾರ್ ಮತ್ತು ಮರಗೋಡು ಪ್ರೇಮಾ ಗಣೇಶ್ ಎಂಬುವರಿಗೆ ಸೇರಿದ ಕಾಫಿ ಎಸ್ಟೇಟ್ಗಳಲ್ಲಿ ಡ್ರೋನ್ ಪ್ರಾತ್ಯಕ್ಷಿಕೆ ನಡೆಸಲಾಯಿತು. ಮಧ್ಯಾಹ್ನ ಚೆಟ್ಟಳ್ಳಿಯ ಸಿಎಚ್ಇಎಸ್ನಲ್ಲಿ ತರಕಾರಿ ಬೆಳೆಗಳು ಆವಕಾಡೊ, ಪೇರಲ, ಕಿತ್ತಳೆ, ಮತ್ತಿತರ ಮೇಲೆ ಡ್ರೋನ್ ಬಳಸಿಕೊಂಡು ಸಿಂಪರಣೆ ಮಾಡಲಾಯಿತು.ನಂತರ ಸುಂಟಿಕೊಪ್ಪದ ಬೋಸ್ ಮಂದಣ್ಣ ಮತ್ತು ಕುಂಬೂರಿನ ಬಿ.ಡಿ.ಮಂಜುನಾಥ್ ಅವರ ಕಾಫಿ ಎಸ್ಟೇಟ್ನಲ್ಲಿ ಮತ್ತು ಮಧ್ಯಾಹ್ನ ತಾಕೇರಿಯ ಸುಬ್ಬಯ್ಯ ಮತ್ತು ಚೆಂಗಪ್ಪ ಅವರ ಏಲಕ್ಕಿ ತೋಟಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಯಿತು. ಪ್ರತಿ ಸ್ಥಳದಲ್ಲಿ ಸುತ್ತಮುತ್ತಲಿನ ರೈತರು ಡ್ರೋನ್ ತಂತ್ರಜ್ಞಾನವನ್ನು ವೀಕ್ಷಿಸಿದರು ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.
BIGG NEWS : ಮೇ ತಿಂಗಳಲ್ಲಿ ‘ಗಗನಯಾನ’ ಪ್ರಯೋಗಕ್ಕೆ ಚಾಲನೆ ; ಕೇಂದ್ರ ಸರ್ಕಾರ ಘೋಷಣೆ
BIGG NEWS : ಮೇ ತಿಂಗಳಲ್ಲಿ ‘ಗಗನಯಾನ’ ಪ್ರಯೋಗಕ್ಕೆ ಚಾಲನೆ ; ಕೇಂದ್ರ ಸರ್ಕಾರ ಘೋಷಣೆ