ಬಳ್ಳಾರಿ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಅಡಿಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಕೈಗೊಳ್ಳುತ್ತಿರುವುರಿಂದ ಮಾ.24ರಿಂದ ಮಾ.31ರವರೆಗೆ ಪ್ರತಿ ದಿನ ಸುಮಾರು 2 ರಿಂದ 3 ಗಂಟೆಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಅಶೋಕ ರೆಡ್ಡಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು: ಎಫ್-11 ಫೀಡರ್ ಏರಿಯಾಗಳಾದ ಅನಂತಪುರ ರೋಡ್, ಷೇಕ್ಷವಲಿ ದರ್ಗಾ, ತಾರಾನಾಥ ಆಸ್ಪತ್ರೆ. ಎಫ್-14 ಫೀಡರ್ ಏರಿಯಾಗಳಾದ ಅನಂತಪುರ ರೋಡ್ ರಾಘವೇಂದ್ರ ಕಾಲೋನಿ 1ನೇ ಹಂತ, ಎಸ್.ಎನ್.ಪೇಟೆ 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
BIG NEWS : SC-ST ಮೀಸಲಾತಿ ಹೆಚ್ಚಳ: ಸಂವಿಧಾನದ 9 ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಪತ್ರ
BIG NEWS : SC-ST ಮೀಸಲಾತಿ ಹೆಚ್ಚಳ: ಸಂವಿಧಾನದ 9 ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಪತ್ರ