ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾರ್ವಜನಿಕರಿಗೆ ಅಂಚೆ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಪೋಸ್ಟ್ ಆಫೀಸ್ ಯಾವ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ರ ಹೆಚ್ಚಿನ ಬಡ್ಡಿ ಸಿಗಲಿದೆ ಎಂಬುದನ್ನು ತಿಳಿಯಿರಿ.
ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಗ್ರಾಹಕರು ಶೇಕಡಾ 4 ರ ದರದಲ್ಲಿ ಬಡ್ಡಿಯ ಲಾಭ ಪಡೆಯುತ್ತಾರೆ. ಇದರೊಂದಿಗೆ ಅಂಚೆ ಕಛೇರಿ ಆರ್‌ಡಿಯಲ್ಲಿ ಗ್ರಾಹಕರಿಗೆ ಶೇ.5.80ರಷ್ಟು ಬಡ್ಡಿ ಸಿಗುತ್ತದೆ.
ಪೋಸ್ಟ್ ಆಫೀಸ್ ಸಮಯ ಠೇವಣಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಶೇಕಡಾ.07ರಷ್ಟು ಬಡ್ಡಿ ಲಾಭವನ್ನು ಪಡೆಯಬಹುದು. ಇದಲ್ಲದೇ ಅಂಚೆ ಕಛೇರಿಯ ಮಾಸಿಕ ಉಳಿತಾಯ ಯೋಜನೆಯಲ್ಲಿ ಗ್ರಾಹಕರು ಶೇ7.10ರಷ್ಟು ಬಡ್ಡಿ ಪಡೆಯಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಅಂಚೆ ಕಚೇರಿ ಗ್ರಾಹಕರಿಗೆ ಶೇ. 8ರಷ್ಟು ಬಡ್ಡಿಯನ್ನು ಪಾವತಿಸುತ್ತಿದೆ. ಇದಲ್ಲದೆ, ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಶೇಕಡಾ 7.10 ರ ದರದಲ್ಲಿ ಬಡ್ಡಿ ಸಿಗಲಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹಣ ಹೂಡಿಕೆ ಮಾಡುವವರಿಗೆ ಶೇಕಡಾ 7 ರ ದರದಲ್ಲಿ ಬಡ್ಡಿ ಸಿಗುತ್ತದೆ. ಅದೇ ಸಮಯದಲ್ಲಿ, ಕಿಸಾನ್ ವಿಕಾಸ್ ಪತ್ರದಲ್ಲಿ ಹಣವನ್ನು ಹೂಡಿಕೆ ಮಾಡುವ ಹೂಡಿಕೆದಾರರು ಶೇಕಡಾ 7.20 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾರೆ.
ಇದೆಲ್ಲದರ ಹೊರತಾಗಿ, ಸರ್ಕಾರದ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾತನಾಡಿದರೆ, ಈ ಯೋಜನೆಯನ್ನು ದೇಶದ ಹೆಣ್ಣುಮಕ್ಕಳಿಗಾಗಿ ನಡೆಸಲಾಗುತ್ತಿದ್ದು, ಇದರಲ್ಲಿ ಶೇಕಡಾ 7.60 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು.
GOOD NEWS : ‘ವೀರಶೈವ ಲಿಂಗಾಯಿತ’ ಸಮುದಾಯದ ಬಸವ ಬೆಳಗು , ವಿದೇಶ ವಿದ್ಯಾ ವಿಕಾಸ ಯೋಜನೆಗಳಿಗೆ ಅರ್ಜಿ ಆಹ್ವಾನ
BREAKING NEWS : ಧಾರವಾಡದಲ್ಲಿ ಭೀಕರ ಅಪಘಾತ : ಕಾರಿಗೆ ಟ್ಯಾಂಕರ್ ಡಿಕ್ಕಿಯಾಗಿ ಮೂವರ ದುರ್ಮರಣ