ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ನಿನ್ನೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಸನ ಪೆನ್ ಡ್ರೈವ್ ಸೂತ್ರಧಾರನೇ ಡಿಸಿಎಂ ಡಿಕೆ ಶಿವಕುಮಾರ್ ಎಂಬುದಾಗಿ ಗಂಭೀರ ಆರೋಪ ಮಾಡಿದ್ದರು. ಇಂದು ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವಂತ 12 ಮಹಿಳೆಯರನ್ನು ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿಯೇ ಇಡಲಾಗಿದೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 12 ಸಂತ್ರಸ್ತೆಯರನ್ನು ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿಯೇ ಇಡಲಾಗಿದೆ. ಮೂರು ದಿನಗಳ ಹಿಂದೆ ಅವರನ್ನು ಕರೆದುಕೊಂಡು ಬಂದಿದ್ದಾರೆ. ಇದೀಗ ಇವರಿಗೆ ರಕ್ಷಣ ಕೊಡುವ ಬಗ್ಗೆ ಅನುಕಂಪದ ಮಾತನಾಡುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ರೇವಣ್ಣ, ಪ್ರಜ್ವಲ್ ರೇವಣ್ಣ ಪ್ರಕರಣ ತನಿಖೆಗಾಗಿ ಎಸ್‌ಐಟಿ ರಚನೆ ಆಗಿದೆ. ಗೃಹ ಸಚಿವರಿಗೆ ಪ್ರಶ್ನೆ ಮಾಡ್ತೀನಿ. ನಿಮ್ಮ ತನಿಖೆ ರೇವಣ್ಣ, ಪ್ರಜ್ವಲ್ ಮೇಲೆ ಯಾಕೆ ಟಾರ್ಗೆಟ್ ಆಗಿದೆ. ವೀಡಿಯೋ ಬಿಡುಗಡೆ ಮಾಡಿದವರನ್ನ ಯಾಕೆ ತನಿಖೆ ಮಾಡ್ತಾ ಇಲ್ಲ. ಮಹಿಳಾ ಆಯೋಗ ಕೂಡ ಪತ್ರ ಬರೆದಿದೆ. ವೀಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಅಂತ. ಆದರೆ ಇದುವರೆಗೂ ಏನು ಮಾಡಿಲ್ಲ. ಮಿಸ್ಟರ್ ಪರಮೇಶ್ವರ ಏನ್ ಮಾಡ್ತಾ ಇದ್ದಾರೆ ಎಂದು ಪ್ರಶ್ನಿಸಿದರು.

ನಾಳೆ ಬೆಳಗ್ಗೆ 10.30ಕ್ಕೆ ‘SSLC’ ಫಲಿತಾಂಶ ಪ್ರಕಟ : ಈ ರೀತಿ ‘ರಿಸಲ್ಟ್’ ಚೆಕ್ ಮಾಡಿ | Karnataka SSLC Exam results 2024

ಮೂರನೇ ಹಂತದ ಮತದಾನದ ಬಳಿಕ ಕಾಂಗ್ರೆಸ್-‘ಇಂಡಿಯಾ’ ಮೈತ್ರಿ ಮುರಿದು ಬಿದ್ದಿದೆ: ಪ್ರಧಾನಿ ಮೋದಿ

Share.
Exit mobile version