ಸುಭಾಷಿತ :

Monday, March 30 , 2020 12:27 AM

‘ಮಂಕಿ ಸೀನ’ನಿಗೆ ಜೈ ಎಂದ ಪ್ರೇಕ್ಷಕ ಪ್ರಭು..! 3.5 / 5


Friday, February 21st, 2020 7:58 pm


ಸಿನಿಮಾಡೆಸ್ಕ್: ತಮ್ಮದೇ ಆದ ನಿರೂಪಣೆ ಶೈಲಿಯಿಂದಾಗಿ ಗಮನ ಸೆಳೆದ ನಿರ್ದೇಶಕ ‘ದುನಿಯಾ’ ಸೂರಿ, ವಿಶೇಷವಾದ ಕಥೆಗಳನ್ನು ಆಯ್ದುಕೊಂಡು ಪ್ರತಿ ಬಾರಿಯೂ ಅಚ್ಚರಿ ಮೂಡಿಸುತ್ತಾರೆ. ಅದೇ ಹಾದಿಯಲ್ಲಿ ಮೂಡೊ ಬಂದಿರುವ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡು ಮೊದಲ ಶೋನಲ್ಲೇ ಭರ್ಜರಿ ಯಶಸ್ಸು ಗಳಿಸಿದೆ. ಕರ್ನಾಟಕ ಮಾತ್ರವಲ್ಲದೇ ಏಕಕಾಲದಲ್ಲಿ ವಿದೇಶಗಳಲ್ಲೂ ರಿಲೀಸ್ ಆಗಿ ಸೈ ಎನಿಸಿಕೊಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ವಾವ್ ಎಂದು ಮನಸಾರೆ ಹೊಗಳಿ ಹಾರೈಸುತ್ತಿದ್ದಾರೆ.

ಧನಂಜಯ್‌, ಅಮೃತಾ ಅಯ್ಯಂಗಾರ್‌, ನಿವೇದಿತಾ ನಟನೆಯ ಚಿತ್ರ ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’. ಈ ಚಿತ್ರವನ್ನು ಸ್ಟುಡಿಯೋ 18 ಬ್ಯಾನರ್‌ನಡಿ ಸುಧೀರ್‌ ನಿರ್ಮಾಣ ಮಾಡಿದ್ದಾರೆ. ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರು ರೇಟಿಂಗ್ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಭೂಗತಲೋಕದ ಹಿನ್ನೆಲೆಯ ಘಟನೆಗಳನ್ನು ಇಟ್ಟುಕೊಂಡು, ಅದನ್ನು ರೋಚಕವಾಗಿ ತೆರೆಗೆ ತಂದಿದ್ದಾರೆ. ಮಂಕಿ ಸೀನ ಮತ್ತು ಟೈಗರ್‌ ಸೀನ ಎಂಬ ಎರಡು ಭಿನ್ನ ಶೇಡ್‌ನಲ್ಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ಧನಂಜಯ್ ಅಭಿನಯದ ಎಕ್ಸಲೆಂಟ್ ಆಗಿದ್ದು, ಅವರ ಅಭಿನಯಕ್ಕೆ ಇಲ್ಲಿ ಹೆಚ್ಚು ಸ್ಕೋಪ್‌ ಇದೆ.  ಹಿಂದೆಂದೂ ಧನಂಜಯ್ ಈ ರೀತಿಯ ಪಾತ್ರದಲ್ಲಿ ನಟಿಸಿರಲಿಲ್ಲ. ಅವರ ಸ್ಟೈಲ್, ಖಡಕ್ ಲುಕ್, ಸಂಭಾಷಣೆ ಚಿತ್ರದ ಹೈಲೈಟ್ ಆಗಿದೆ. ಸೂರಿ ಅವರ ನಿರ್ದೇಶನವಂತೂ ಮೈಂಡ್ ಬ್ಲೋಯಿಂಗ್ ಆಗಿದೆ.

ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ. ಕ್ರೈಂ ಲೋಕದ ವೈಭವೀಕರಣಕ್ಕೆ ಅವರು ಹೆಚ್ಚು ಒತ್ತುಕೊಟ್ಟಿದ್ದಾರೆ. ಕಥೆ ಸಾಗುವ ರೀತಿಗೆ ಜನ ಮರುಳಾಗಿದ್ದಾರೆ. ಥಿಯೇಟರ್ ನಿಂದ ಹೊರ ಬಂದರು ಅದೇ ಗುಂಗಲ್ಲಿರುವ ಪ್ರೇಕ್ಷಕರು ಮತ್ತೊಮ್ಮೆ ಸಿನಿಮಾ ನೋಡಬೇಕೆಂಬ ಬಯಕೆ ವ್ಯಕ್ತ ಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ದುನಿಯಾ ಸೂರಿಯ ಹೊಸತನದ ನಿರೂಪಣೆಗೆ ಜೈ ಕಾರ ಜೋರಾಗಿಯೇ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲೂ ಸಿನಿಮಾ ಸೂಪರ್ ಹಿಟ್ ಹವಾ ಕ್ರಿಯೇಟ್ ಮಾಡಿದೆ. ಡಾಲಿ ಧನಂಜಯ್ ‘ಟಗರು’ನಲ್ಲಿ ಅಬ್ಬರಿಸಿದ್ದಂತೆ ಇಲ್ಲೂ ಅಬ್ಬರಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions