ಸುಭಾಷಿತ :

Wednesday, January 29 , 2020 9:38 PM

‘ಅಭಿಮಾನ ಅಂದ್ರೆ ಇದು ಗುರು’…ನಟಿ ಭೇಟಿಗಾಗಿ ಐದು ದಿನ ಫುಟ್ ಬಾತ್ ನಲ್ಲಿ ಮಲಗಿದ ಯುವಕ..!


Thursday, January 16th, 2020 9:13 pm

ಸಿನಿಮಾ ಡೆಸ್ಕ್ :   ಅಭಿಮಾನಿಯೊಬ್ಬ ನಟಿ ಪೂಜಾ ಹೆಗ್ಡೆಯನ್ನು ಭೇಟಿಯಾಗುವ ಆಸೆಯಿಂದ ಮುಂಬೈನ ಅವರ ಮನೆ ಮುಂದೆ ಐದು ದಿನಗಳ ಕಾದ ಘಟನೆ ನಡೆದಿದೆ. ಬಾಲಿವುಡ್ ನಟಿ ಪೂಜಾ ಹೆಗ್ಡೆ ಅವರನ್ನು ನೋಡಲು ಅಭಿಮಾನಿಯೊಬ್ಬ 5 ದಿನ ಫುಟ್‍ಪಾತ್‍ನಲ್ಲಿ ಮಲಗಿದ್ದು, ಆತನನ್ನು ನಟಿ ಭೇಟಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ ಐದು ದಿನಗಳ ಕಾಲ ಮುಂಬೈ ರಸ್ತೆಯಲ್ಲೇ ಯುವಕ ಕಳೆದಿದ್ದಾನೆ. ಹೇಗಾದ್ರೂ ಮಾಡಿ ಪೂಜಾ ಹೆಗ್ಡೆಯನ್ನು ಭೇಟಿಯಾಗಬೇಕು ಎಂಬ ಉದ್ದೇಶದಿಂದ ಚಳಿ, ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಫುಟ್‍ಪಾತ್ ಮೇಲೆ ಕಾದು ಕುಳಿತಿದ್ದಾನೆ, ಈ ವಿಷಯವನ್ನು ಸ್ವತಃ ಪೂಜಾ ಹೆಗ್ಡೆ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಯುವಕನನ್ನು ಭೇಟಿ ಮಾಡಿ ಜೊತೆಗೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೂಜಾ ಹೆಗಡೆ ಆದರೆ ನನ್ನ ಅಭಿಮಾನಿ ಇಷ್ಟೆಲ್ಲಾ ಕಷ್ಟಪಟ್ಟಿದ್ದು ತುಂಬಾ ನೋವಿನ ಸಂಗತಿ. ನನಗಾಗಿ ಬಂದ ಅಭಿಮಾನಿ ಈ ರೀತಿ ಫುಟ್‍ಪಾತ್ ಮೇಲೆ ನಿದ್ದೆ ಮಾಡಿದ್ದು ಸರಿಯಲ್ಲ.ನೀವು ರಸ್ತೆಯಲ್ಲಿ ಮಲಗುವುದನ್ನು ನೋಡಲು ನಾನು ಎಂದಿಗೂ ಬಯಸುವುದಿಲ್ಲ. ನೀವು ಎಲ್ಲಿದ್ದರೂ ನಿಮ್ಮ ಪ್ರೀತಿಯನ್ನು ನಾನು ಫೀಲ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

https://www.instagram.com/hegdepooja/?utm_source=ig_embed

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions