ಸುಭಾಷಿತ :

Monday, February 17 , 2020 5:13 AM

‘ದಾಳಿಂಬೆ ಬೆಳೆಗಾರ’ರಿಗೆ ಬಹು ಮುಖ್ಯ ಮಾಹಿತಿ : ಹೀಗಿದೆ ದಾಳಿಂಬೆ ಬೆಳೆಯಲ್ಲಿ ತೆಗೆದುಕೊಳ್ಳಬೇಕಾದ ‘ಮುಂಜಾಗ್ರತಾ ಕ್ರಮಗಳು’


Wednesday, January 8th, 2020 1:50 pm


ಕೋಲಾರ : ದಾಳಿಂಬೆ ಗಿಡಗಳ ನಾಟಿ ಮಾಡುವಾಗ ರೋಗಮುಕ್ತವಾಗಿರಬೇಕು ಹಾಗೇಯೇ ಗಿಡಗಳಿಗೆ ದುಂಡಾಣು ಆಧಾರಿತ ರೋಗದ ಯಾವುದೇ ಲಕ್ಷಣಗಳು ಗಿಡಗಳ ಮೇಲೆ ಇರಬಾರದು. ಯಾವುದೇ ಗಾಯಗಳಾಗದಂತೆ ಎಚ್ಚರ ವಹಿಸಬೇಕು. ದಾಳಿಂಬೆ ಬೇಸಾಯ ಮಾಡುವ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ರೋಗ ಪೀಡಿತ ಎಲೆ, ಕಾಂಡ ಮತ್ತು ಕಾಯಿಗಳನ್ನು ಕಿತ್ತು ಸುಡಬೇಕು ಇದರಿಂದ ರೋಗ ಪ್ರಸಾರವನ್ನು ತಡೆಗಟ್ಟಬಹುದು.

ದಾಳಿಂಬೆ ಬೆಳೆಗೆ ಶಿಫಾರಸ್ಸು ಮಾಡಿದ ಪೋಷಕಾಂಶಗಳನ್ನು ಕಾಲ-ಕಾಲಕ್ಕೆ ಒದಗಿಸಬೇಕು. ನಾಟಿ ಮಾಡಿದ ಗಿಡಗಳಲ್ಲಿ ಮೂರು ವರ್ಷಗಳ ನಂತರವೇ ಹೂ-ಕಾಯಿಗಳನ್ನು ಬಿಟ್ಟು ಮೊದಲ ಇಳುವರಿಯನ್ನು ಪಡೆಯಬೇಕು. ರೋಗ ಬರುವ ಅಥವಾ ರೋಗದ ಇತಿಹಾಸ ಇರುವ ದಾಳಿಂಬೆ ಪ್ರದೇಶದಲ್ಲಿ ಸಾಮಾನ್ಯವಾಗಿ ಹಸ್ತ ಬಹಾರನಲ್ಲಿ (ಸೆಪ್ಟೆಂಬರ-ಅಕ್ಟೋಬರ್) ಹೂ ಬಿಡುವಂತೆ ಚಾಟನಿ ಮಾಡಬೇಕು.

ಚಾಟನಿ ಮಾಡುವ ಸಮಯದಲ್ಲಿ ಚಾಟನಿಗೆ ಬಳಸುವ ಉಪಕರಣಗಳನ್ನು ಕ್ರಿಮಿನಾಶಕ 2.5% ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಲ್ಲಿ ಅದ್ದಿ ಬಳಸಬೇಕು. ಕ್ರಿಮಿನಾಶಕಗಳನ್ನು ತಂಪಾಗಿರುವ ವಾತಾವರಣದಲ್ಲಿ ಸಿಂಪಡಿಸಬೇಕು. ಕ್ರಿಮಿನಾಶಕಗಳನ್ನು ಬೆರೆಸುವಾಗ ತಜ್ಞರ ಸಲಹೆಯಂತೆ ಒಂದಕ್ಕೊಂದು ಪೂರಕವಾಗಿರುವ ಔಷಧಿಗಳನ್ನು ಮಾತ್ರ ಬಳಸಬೇಕು.

ವಾತಾವರಣದಲ್ಲಿ ಮಂಜು ಕವಿದ ಹವಾಮಾನ ಅಥವಾ 3-4 ದಿನಗಳ ಸತತ ತುಂತುರು ಮಳೆ ಅಥವಾ ವಾತಾವರಣದಲ್ಲಿ ಹೆಚ್ಚಿನ ತೇವಾಂಶ ಅಥವಾ ಉಷ್ಣಾಂಶದಲ್ಲಿ ರಾತ್ರಿ ಮತ್ತು ಹಗಲಿಗೆ ಹೆಚ್ಚಿಗೆ ವ್ಯತ್ಯಾಸವಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಅವಶ್ಯಕ ದುಂಡಾಣುನಾಶಕಗಳನ್ನು ಬಳಸಬೇಕು. ಬೆಳೆಯ ವಿಶ್ರಾಂತಿಯ ಹಂತದಲ್ಲಿದ್ದಾಗಲೂ ಕೂಡಾ ಮಳೆಯ ವಾತಾವರಣದಲ್ಲಿ ಅಥವಾ ಹವಾಮಾನ ಉಷ್ಣಾಂಶ ಮತ್ತು ಆದ್ರ್ರತೆ ಹೆಚ್ಚಾಗಿದ್ದಲ್ಲಿ ಅಂಗಮಾರಿ ರೋಗಕ್ಕೆ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 7829512236 ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ಅವರನ್ನು ಸಂಪರ್ಕಿಸಬಹುದಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions