ಚಿತ್ರದುರ್ಗ: ರೇಣುಕಾಸ್ವಾಮಿ ಮರ್ಡರ್ ಗೂ ಮುನ್ನ, ಬೆಂಗಳೂರಿಗೆ ಆತನನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಇಂದು ರೇಣುಕಾಸ್ವಾಮಿ ಕಿಡ್ನ್ಯಾಪ್ ಗೆ ಬಳಸಿದ್ದಂತ ಕಾರೊಂದನ್ನು ಸೀಜ್ ಮಾಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇಂದು ಚಿತ್ರದುರ್ಗ ಪೊಲೀಸರು ಹಾಗೂ ಕಾಮಾಕ್ಷಿಠಾಣೆಯ ಪೊಲೀಸರು ಜಂಟಿಯಾಗಿ ತನಿಖೆಗೆ ಇಳಿದಿದ್ದಾರೆ.

ಚಿತ್ರದುರ್ಗದ ಐನಳ್ಳಿ ಬಳಿಯ ಕುರುಬರಹಟ್ಟಿಯಲ್ಲಿ ಆರೋಪಿ ರವಿಶಂಕರ್ ಮನೆಯಲ್ಲಿ ನಿಲ್ಲಿಸಿದ್ದಂತ ಇಟಿಯೋಸ್ ಕಾರನ್ನು ಪರಶಿಲೀನೆ ನಡೆಸಿದ್ದರು. ಇದೇ ಕಾರಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕಿಡ್ನ್ಯಾಪ್ ಮಾಡಿ ಕರೆದೊಯ್ಯಲಾಗಿತ್ತಂತೆ.

ಈ ಹಿನ್ನಲೆಯಲ್ಲಿ ರೇಣುಕಾಸ್ವಾಮಿ ಹತ್ಯೆಗೂ ಮುನ್ನಾ ಕಿಡ್ನ್ಯಾಪ್ ಮಾಡಲು ಬಳಸಿದ್ದಂತ ಕಾರಿನಲ್ಲಿ ಯಾವುದಾದರೂ ಸುಳಿವು ಸಿಗಲಿದ್ಯಾ ಅಂತ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೇ ಪ್ರಕರಣ ಸಂಬಂಧ ಮುಖ್ಯ ಸಾಕ್ಷಿಯಾಗಿರುವಂತ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಕೇಂದ್ರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಕೇಂದ್ರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

Share.
Exit mobile version