ಕೋಲಾರ: ಕೊಲೆ ಆರೋಪಿಯೊಬ್ಬನ್ನು ಬಂಧಿಸೋದಕ್ಕೆ ತೆರಳಿದ್ದಂತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಂತ ಆರೋಪಿಯ ಕಾಲಿಗೆ, ಪೊಲೀಸರು ಗುಂಡೇಟು ನೀಡಿ, ಬಂಧಿಸಿರೋ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ನಗರಸಭಾ ಸದಸ್ಯನ ಬರ್ಬರವಾಗಿ ಕೊಲೆ ಪ್ರಕರಣದ ಆರೋಪಿಯಾಗಿದ್ದಂತ ಬಾಲಾಜಿ ಸಿಂಗ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಪೊಲೀಸರಿಗೆ ಬಾಲಾಜಿ ಇರೋ ಸ್ಥಳದ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಆತನನ್ನು ಬಂಧಿಸೋದಕ್ಕೆ ಪೊಲೀಸರು ತೆರಳಿದ್ದರು.
ತನ್ನನ್ನು ಬಂಧಿಸೋದಕ್ಕೆ ಬಂದಿದ್ದಾರೆ ಎಂಬುದಾಗಿ ಅರಿತಂತ ಬಾಲಾಜಿ ಸಿಂಗ್, ಪೊಲೀಸರ ಮೇಲೆ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದನು. ಈ ಹಿನ್ನಲೆಯಲ್ಲಿ ಆತನ ಕಾಲಿಗೆ ಪೊಲೀಸರು ಗುಂಡೇಟನ್ನು ಆತ್ಮರಕ್ಷಣೆಗಾಗಿ ನೀಡಿ, ಬಂಧಿಸಿದ್ದಾರೆ.
ಇನ್ನೂ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿ, ಇದೀಗ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದರು.
ಮಕ್ಕಳಿಗೆ ‘ಬಜೆ’ ಎಷ್ಟು ಉಪಯೋಗಕಾರಿ ಗೊತ್ತಾ.? | Calamus Root Vacha Bach Baje Benefits