ಮಂಡ್ಯದಲ್ಲಿ ಪೊಲೀಸ್ ಠಾಣೆ ಹಿಂದಿನ ವಿಶ್ರಾಂತಿ ಗೃಹದಲ್ಲೇ ಪೇದೆ ಆತ್ಮಹತ್ಯೆ

ಮಂಡ್ಯ : ಮದ್ದೂರು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ರಮೇಶ್ (35) ಎಂಬುವರೇ ಆತ್ಮಹತ್ಯೆ ಮಾಡಿಕೊಂಡಿರುವ ಪೇದೆಯಾಗಿದ್ದು, ನಗರದ ಪೊಲೀಸ್ ಠಾಣೆಯ ಹಿಂದೆ ಇರುವ ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಂಗಳವಾರ ರಾತ್ರಿ 10 ಘಂಟೆಗೆ ಪೊಲೀಸ್ ಪೇದೆಯೊಬ್ಬರು ವಿಶ್ರಾಂತಿ ಗೃಹಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಮೃತರ ಪತ್ನಿ ಪುಷ್ಪಲತಾ ಎಂಬುವರು … Continue reading ಮಂಡ್ಯದಲ್ಲಿ ಪೊಲೀಸ್ ಠಾಣೆ ಹಿಂದಿನ ವಿಶ್ರಾಂತಿ ಗೃಹದಲ್ಲೇ ಪೇದೆ ಆತ್ಮಹತ್ಯೆ