ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಡರಾತ್ರಿ ಕೊಲೆ ಬೆದರಿಕೆ ಬಂದಿದ್ದು, ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಈ ಧಮ್ಕಿ ಹಾಕಲಾಗಿದೆ. ಈ ಬೆದರಿಕೆ ಕರೆ ನಂತರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ತಕ್ಷಣವೇ ಕರೆಯನ್ನ ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ರಾಯಗರ್‌ಪುರದ ಪ್ರಸಾದ್‌ನಗರದ ಕುಡುಕನನ್ನ ಪೊಲೀಸರು ಬಂಧಿಸಿದ್ದಾರೆ.
ಮಾಹಿತಿ ಪ್ರಕಾರ, ಆರೋಪಿ ಹೇಮಂತ್ ಮದ್ಯದ ಅಮಲಿನಲ್ಲಿ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಪಿಎಂ ನರೇಂದ್ರ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ. ಪಿಸಿಆರ್ ಕರೆಯಲ್ಲಿ ಬೆದರಿಕೆ ಕರೆ ಬಂದ ನಂತರ, ಪೊಲೀಸ್ ತಂಡವನ್ನ ಕಳುಹಿಸಲಾಯಿತು ಮತ್ತು 48 ವರ್ಷದ ಹೇಮಂತ್ ಕುಮಾರ್ ಅವರನ್ನ ವಶಕ್ಕೆ ತೆಗೆದುಕೊಂಡರು. ಹೇಮಂತ್ ಕುಮಾರ್ ಕರೋಲ್ ಬಾಗ್ ನಿವಾಸಿಯಾಗಿದ್ದು, ಪೊಲೀಸ್ ತಂಡ ಆತನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿತು. ಹೇಮಂತ್ ಕಳೆದ 6 ವರ್ಷಗಳಿಂದ ನಿರುದ್ಯೋಗಿಯಾಗಿದ್ದು, ಮದ್ಯ ವ್ಯಸನಿಯಾಗಿದ್ದಾನೆ ಅನ್ನೋದು ತಿಳಿದು ಬಂದಿದೆ.
ಯೋಗಿ ಆದಿತ್ಯನಾಥ್ ಅವರಿಗೂ ಬೆದರಿಕೆ.!
ಏಪ್ರಿಲ್ ತಿಂಗಳ ಆರಂಭದಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಕೊಲೆ ಬೆದರಿಕೆಗಳು ಬಂದಿದ್ದವು. ಈ ಬೆದರಿಕೆಯನ್ನ ಅಪರಿಚಿತ ವ್ಯಕ್ತಿಯೊಬ್ಬರು 112 ಸಂಖ್ಯೆಗೆ ಸಂದೇಶ ಕಳುಹಿಸಿದ್ದಾರೆ. ಇದಾದ ಬಳಿಕ ಪೊಲೀಸ್ ಇಲಾಖೆಯಲ್ಲಿ ಗಲಾಟೆ ನಡೆದ ಬಳಿಕ ಏಜೆನ್ಸಿಗಳು ಎಚ್ಚೆತ್ತಿದ್ದವು. ಸಿಎಂ ಯೋಗಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಏಜೆನ್ಸಿಗಳು ವ್ಯಕ್ತಿಯೊಬ್ಬನನ್ನ ಬಂಧಿಸಿದ್ದವು. ಅಂದ್ಹಾಗೆ, ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆಗಳು ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಲಕ್ನೋದ ಅವರ ನಿವಾಸದ ಬಳಿ ಬಾಂಬ್ ಇರುವ ಬಗ್ಗೆ ಮಾಹಿತಿ ಇತ್ತು.
BREAKING NEWS : ಮೇ 28ರವರೆಗೆ ಎಲ್ಲಾ ‘ಗೋ ಫಸ್ಟ್’ ವಿಮಾನಗಳ ಹಾರಾಟ ರದ್ದು |Go First cancels all flights
ಗ್ಯಾರಂಟಿ ಜಾರಿ ಮಾಡದೆ ಇರುವುದು ಜನರಿಗೆ ಮಾಡಿದ ದೊಡ್ಡ ಅಪಮಾನ – ಮಾಜಿ ಸಚಿವ ಆರ್.ಅಶೋಕ್
BREAKING NEWS: ಕನ್ನಡದ ‘ಖ್ಯಾತ ವಿಮರ್ಶಕ ಜಿ.ಹೆಚ್ ನಾಯಕ’ ಇನ್ನಿಲ್ಲ | G.H Nayaka No More