ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಹೊಸದಾಗಿ ಬಿಬಿಎಂಪಿಯಿಂದ ರಸ್ತೆಗೆ ಡಾಂಬಾರ್ ಮಾಡಲಾಗಿತ್ತು. ಆದ್ರೇ.. ಈ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋಗಿದ್ದಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ ರಾಷ್ಟ್ರಮಟ್ಟದಲ್ಲಿ ಈ ವಿಷಯ ಸುದ್ದಿಯಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಮೂಲಕ ಬಿಬಿಎಂಪಿಗೆ ಪ್ರಧಾನಿ ಕಾರ್ಯಾಲಯವು ವರದಿ ಕೇಳಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ ಸರ್ಕಾರಕ್ಕಿಲ್ಲ – ಸಿಎಂ ಬಸವರಾಜ ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಭೇಟಿಯ ಸಂದರ್ಭದಲ್ಲಿ, ಅವರು ಸಾಗುತ್ತಿದ್ದಂತ ಮಾರ್ಗದ ರಸ್ತೆಗಳನ್ನು ಬಿಬಿಎಂಪಿಯಿಂದ ರಾತ್ರೋ ರಾತ್ರಿ ಡಾಂಬಾರಿಕರಣ ಮಾಡಲಾಗಿತ್ತು. ಹೀಗೆ ಮಾಡಿದಂತ ರಸ್ತೆ, ಒಂದೇ ದಿನದಲ್ಲಿ ಹಾಳಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಮೂಲಕ ಬಿಬಿಎಂಪಿ ಡಾಂಬಾರೀಕರಣದ ಕಳಪೆ ಕಾಮಗಾರಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.
BIG NEWS: ಟಾಟಾ ಮೋಟಾರ್ಸ್ ಇವಿ ಅಗ್ನಿ ದುರಂತ: ತನಿಖೆಗೆ ಕೇಂದ್ರ ಸರ್ಕಾರ ಆದೇಶ | Tata Motors EV fire incident
ಈ ಬೆನ್ನಲ್ಲೇ ಪ್ರಧಾನಿ ಕಾರ್ಯಾಲಯದಿಂದ ರಾಜ್ಯ ಸರ್ಕಾರಕ್ಕೆ ವರದಿಯನ್ನು ಕೇಳಲಾಗಿದೆ. ಸಿಎಂ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯಿಂದ ಬಿಬಿಎಂಪಿಯಿಂದ ವರದಿ ಕಳುಹಿಸಿಕೊಡುವಂತೆ ಪತ್ರದಲ್ಲಿ ಸೂಚಿಸಲಾಗಿದೆ. ಈ ಮೂಲಕ ಬಿಬಿಎಂಪಿ ಕಳಪೆ ಕಾಮಗಾರಿಗೆ ಪ್ರಧಾನಿ ಕಾರ್ಯಾಲಯದಿಂದ ಬಿಗ್ ಶಾಕ್ ನೀಡಲಾಗಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಚಿಂತನೆ ಸರ್ಕಾರಕ್ಕಿಲ್ಲ – ಸಿಎಂ ಬಸವರಾಜ ಬೊಮ್ಮಾಯಿ