ಬೆಂಗಳೂರು : PM SHRI ಶಾಲೆಗಳನ್ನು 3ನೇ ಹಂತದಲ್ಲಿ ಆರಂಭಿಸಲು ನಗರ ಸ್ಥಳೀಯ ಸಂಸ್ಥೆ ಇವರಿಂದ ಒಪ್ಪಿಗೆ ಪತ್ರ ಪಡೆಯುವ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ದೇಶದಾದ್ಯಂತ 14500 ಕ್ಕೂ ಹೆಚ್ಚು, ಶಾಲೆಗಳನ್ನು PM SHRI ಶಾಲೆಗಳಾಗಿ ಅಭಿವೃದ್ಧಿ ಪಡಿಸುವುದು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ. ಕೇಮದ್ರ ಸರ್ಕಾರದಿಂದ ಆಯ್ಕೆಯಾದ ಶಾಲೆಗಳಿಗೆ 60:40 (Central:State) ಅನಪಾತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಸಮಗ್ರ ಶೈಕ್ಷಣಿಕ ಶಾಲೆಯ ಅಭಿವೃದ್ಧಿಗೆ ಅನುದಾನ ಒದಗಿಸಲಾಗುತ್ತದೆ. ಈ ಯೋಜನೆಯ ಜಾರಿಯಲ್ಲಿರುವ ಯೋಜನೆಗಳು/ ಪಂಚಾಯತ್ ತಾಜ್ ಸಂಸ್ಥೆಗಳು/ ನಗರ ಸಂಸ್ಥೆಗಳು ಮತ್ತು ಶಾಲೆಯ ಮೂಲಸೌಕರ್ಯ, ಉನ್ನತೀಕರಣ ಮತ್ತು ಸೌಲಭ್ಯಗಳ ಸೃಷ್ಟಿಗಾಗಿ ಸಮುದಾಯದ ಭಾಗವಹಿಸುವಿಕೆಗೆ ಅವಕಾಶಗಳನ್ನು ಕಲ್ಪಿಸುತ್ತದೆ.

UDISE+ ಕೋಡ್ ಹೊಂದಿರುವ ಸಮಗ್ರ ಶಿಕ್ಷಣ ಕರ್ನಾಟಕ ಅಡಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಗಳು (1-5/1-8ನೇ ತರಗತಿ) ಮತ್ತು ಮಾಧ್ಯಮಿಕ/ಹಿರಿಯ ಮಾಧ್ಯಮಿಕ ಶಾಲೆಗಳನ್ನು (1-10/1-12/6-10/6-12ನೇ ತರಗತಿ) ಈ ಯೋಜನೆಯಡಿ ಆಯ್ಕೆಗೆ ಪರಿಗಣಿಸಲಾಗುತ್ತದೆ.

2023-24 ನೇ ಶೈಕ್ಷಣಿಕ ವರ್ಷದಲ್ಲಿ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವು ಒಟ್ಟು 12494 ಬೆಂಚ್ ಮಾರ್ಕ್ ಶಾಲೆಗಳಲ್ಲಿ, ಒಟ್ಟು 129 (ಪ್ರಾಥಮಿಕ-01, ಹಿರಿಯ ಪ್ರಾಥಮಿಕ-119 ಮತ್ತು ಪ್ರೌಢ 09) ಶಾಲೆಗಳನ್ನು ಅನುಮೋದನೆ ಮಾಡಿರುತ್ತದೆ.

2023-24 ನೇ ಶೈಕ್ಷಣಿಕ ವರ್ಷದ ಎರಡನೇ ಹಂತದಲ್ಲಿ ಕೇಂದ್ರ ಸರ್ಕಾರವು ಒಟ್ಟು-12232 ಬೆಂಚ್ ಮಾರ್ಕ್ ಶಾಲೆಗಳಲ್ಲಿ, ಒಟ್ಟು 244 (ಪ್ರಾಥಮಿಕ-11, ಹಿರಿಯ ಪ್ರಾಥಮಿಕ-192 ಮತ್ತು ಪ್ರೌಢ 41) ಶಾಲೆಗಳನ್ನು ಪಿಎಂಶ್ರೀ ಶಾಲೆಗಳಾಗಿ ಅನುಮೋದಿಸಿರುತ್ತದೆ. ಈ ಸಾಧನೆಗೆ ನಿಮ್ಮ ಸಹಕಾರವನ್ನು ಸ್ಮರಿಸಲಾಗಿದೆ.

Share.
Exit mobile version