ಬೆಂಗಳೂರು: ತುಮಕೂರಿನ ಹೆಚ್ ಎಎಲ್ ನ ಬೃಹತ್ ಹೆಲಿಕಾಪ್ಟರ್ ತಯಾರಕಾ ಘಟಕವೊಂದನ್ನು ನಾಳೆ ಪ್ರಧಾನಿ ಮೋದಿಯವರು ಉದ್ಘಾಟಿಸಲಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ನಂತರ ವಿವಿಧ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ತೆರಳಲಿದ್ದಾರೆ. ನಾಳೆ ಅವರ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತಿವೆ.
ನಾಳೆ ಬೆಳಗ್ಗೆ 11.30 ಕ್ಕೆ ಪ್ರಧಾನಿ ಬಿಐಇಸಿಯಲ್ಲಿ ಇಂಧನ ಸಪ್ತಾಹ ಉದ್ಘಾಟನೆ ನೆರೆವೇರಿಸಲಿದ್ದಾರೆ. ಬೆಂಗಳೂರು ಉತ್ತರ ವಲಯದ ಮಾದವಾರ ಬಳಿಯಿರುವ ಬಿಐಇಸಿಯಲ್ಲಿ ಜಾಗತಿಕ ತೈಲ, ಅನಿಲ ವಲಯದ ಸಿಇಒಗಳ ದುಂಡು ಮೇಜಿನ ಸಭೆ ನಡೆಯಲಿದೆ. ಈ ಕಾರ್ಯಕ್ರಮದ ಸಂವಾದದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ನಂತರ ಮೋದಿ ಹಸಿರು ಸಾಗಣೆ ಜಾಥಾಗೆ ಚಾಲನೆ ನೀಡಲಿದ್ದಾರೆ. ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳು, ಸಾಗಣೆ ಜಾಥಾ ಇದೆಲ್ಲದರ ಬಳಿಕ ಶೀಷರಹಿತ ಉಪಕ್ರಮದಡಿ ಸಮವಸ್ತ್ರವನ್ನ ಮೋದಿ ಬಿಡುಗಡೆ ಮಾಡುತ್ತಾರೆ. ನಾಳೆ ಮಧ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿ ಬೆಂಗಳೂರಿನಿಂದ ತುಮಕೂರು ಜಿಲ್ಲೆಯ ಕಾರ್ಯಕ್ರಮಗಳಿಗೆ ತೆರಳಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಹೆಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
BIGG NEWS: ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗಿಲ್ಲ :ಡಿ.ಕೆ ಸುರೇಶ್ ವಾಗ್ದಾಳಿ
BIG NEWS : ಧೂಮಪಾನ ಮಾಡದವರೂ ಬೇಗ ʻಕ್ಯಾನ್ಸರ್ʼಗೆ ತುತ್ತಾಗುತ್ತಿದ್ದಾರೆ; ಸಂಶೋಧನೆಯಿಂದ ಶಾಕಿಂಗ್ ಸತ್ಯ ಬಯಲು