ಮಗುವಿನ ನಿರೀಕ್ಷೆಯಲ್ಲಿರುವ ವಿರುಷ್ಕಾ ದಂಪತಿಗೆ ಪ್ರಧಾನಿ ಮೋದಿ ವಿಶ್‌..! – Kannada News Now


India

ಮಗುವಿನ ನಿರೀಕ್ಷೆಯಲ್ಲಿರುವ ವಿರುಷ್ಕಾ ದಂಪತಿಗೆ ಪ್ರಧಾನಿ ಮೋದಿ ವಿಶ್‌..!

ನವದೆಹಲಿ: ಫಿಟ್​ ಇಂಡಿಯಾ ಅಭಿಯಾನದ ಮೊದಲ ವಾರ್ಷೀಕೋತ್ಸವದ ಅಂಗವಾಗಿ ಇಂದು ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್‌ ಕೊಹ್ಲಿ ದಂಪತಿಗೆ ಶುಭಾಷಯ ತಿಳಿಸಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರೊಂದಿಗೆ ಫಿಟ್​ನೆಸ್​​ ಬಗ್ಗೆ ಚರ್ಚೆ ನಡೆಸಿದ ಪ್ರಧಾನಿ ಮೋದಿ, “ಆಟಗಾರರ ನಿತ್ಯ ಬದುಕಿನಲ್ಲಿ ಫಿಟ್​ನೆಸ್​ ಎಷ್ಟು ಮುಖ್ಯವಾಗುತ್ತೆ ಹಾಗೂ ಒತ್ತಡದ ದಿನಚರಿಯ ನಡುವೆಯೂ ನೀವು ಇಷ್ಟೊಂದು ಲವಲವಿಕೆಯಿಂದಿರಲು ಹೇಗೆ ಸಾಧ್ಯ?” ಎಂದು ಪ್ರಧಾನಿ ಮೋದಿ ಕೊಹ್ಲಿ ಅವ್ರನ್ನ ಪ್ರಶ್ನಿಸಿದ್ರು. ಇದಕ್ಕೆ ನಗುತ್ತಲೇ ಉತ್ತರಿಸಿದ ಕೊಹ್ಲಿ, “ನಾನು ಫಿಟ್​ನೆಸ್ ಬಗ್ಗೆ​ ಹೆಚ್ಚು ಗಮನ ಹರಿಸುವುದರಿಂದ ಇದೆಲ್ಲವನ್ನೂ ನಿಭಾಯಿಸಲು ಸಾಧ್ಯವಾಗುತ್ತದೆ” ಎಂದ್ರು. ಟೀಂ ಇಂಡಿಯಾ ಆಟಗಾರರಿಗೆ ನಡೆಸುವ ಯೊ ಯೊ ಟೆಸ್ಟ್​ ಬಗ್ಗೆಯೂ ಮೋದಿ ಕೊಹ್ಲಿ ಅವರೊಂದಿಗೆ ಚರ್ಚೆ ನಡೆಸಿದರು. ಇನ್ನು ಚರ್ಚೆಯ ಕೊನೆಯಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಪ್ರಧಾನಿ ಶುಭಾಶಯ ತಿಳಿಸಿದ್ರು.
error: Content is protected !!