ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟ(Commonwealth Games)ದಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟುಗಳಾದ ವಿನೇಶ್ ಫೋಗಟ್(Vinesh Phogat) ಮತ್ತು ರವಿ ದಹಿಯಾ (Ravi Dahiya) ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,ʻವಿನೇಶ್ ಫೋಗಟ್ ಅವರ ಗೆಲುವು ಬಹಳ ವಿಶೇಷವಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಚಿನ್ನವನ್ನು ಗೆದ್ದ ಭಾರತದ ಅತ್ಯಂತ ಪ್ರತಿಷ್ಠಿತ ಕ್ರೀಡಾಪಟುಗಳಲ್ಲಿ ಒಬ್ಬರುʼ ಎಂದು ಶ್ಲಾಘಿಸಿದ್ದಾರೆ.

ಇನ್ನೂ, ʻರವಿ ದಹಿಯಾ ಅವರು ಚಾಂಪಿಯನ್‌ನಂತೆ ಆಡಿ ಚಿನ್ನದ ಪದಕ ಗೆದ್ದಿದ್ದು, ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. ಭಾವೋದ್ರಿಕ್ತ ಮತ್ತು ಸಮರ್ಪಣಾ ಮನೋಭಾವ ಇದ್ದರೆ ಯಾವುದೇ ಕನಸು ದೊಡ್ಡದಲ್ಲ ಎಂಬುದನ್ನು ಅವರ ಯಶಸ್ಸು ಸಾಬೀತುಪಡಿಸುತ್ತದೆʼ ಎಂದಿದ್ದಾರೆ.

ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್ ಅವರನ್ನು ಅಭಿನಂದಿಸಿದ ಪ್ರಧಾನಿ, ʻಪೂಜಾ ಗೆಹ್ಲೋಟ್ ಅವರು ಧೈರ್ಯದಿಂದ ಉದ್ದಕ್ಕೂ ಹೋರಾಡಿದರು ಮತ್ತು ಆಟಗಳ ಮೂಲಕ ಅಸಾಧಾರಣ ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಿದರು. ಅವರ ಮುಂಬರುವ ಪ್ರಯತ್ನಗಳಿಗಾಗಿ ಅವರಿಗೆ ಆಲ್ ದಿ ಬೆಸ್ಟ್ʼ ಎಂದು ಮೋದಿ ಆಶಿಸಿದ್ದಾರೆ.

BIGG NEWS : ಕೊಡಗು ಜಿಲ್ಲೆಯಲ್ಲಿ ಮುಂದುವರೆದ ವರುಣನ ಆರ್ಭಟ : ಹಲವಡೆ ರಸ್ತೆ ಸಂಪರ್ಕ ಕಡಿತ

ʻಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದೇ ತಪ್ಪಾಯ್ತಾ?ʼ: ಗಂಡನ ಕಿರುಕುಳ ತಾಳಲಾರದೇ ಅಮೆರಿಕದಲ್ಲಿ ಆತ್ಮಹತ್ಯೆಗೆ ಶಾರಣಾದ ಭಾರತೀಯ ಮಹಿಳೆ… Video

BIGG NEWS : ರೈತ ಸಮುದಾಯಕ್ಕೆ ಮುಖ್ಯ ಮಾಹಿತಿ : ಆಗಸ್ಟ್ 15 ರೊಳಗೆ ಪಿ.ಎಂ.ಕಿಸಾನ್ ಯೋಜನೆಯಡಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ

Share.
Exit mobile version