ಸುಭಾಷಿತ :

Tuesday, January 28 , 2020 2:08 PM

ಬ್ರಿಕ್ಸ್​ ಶೃಂಗಸಭೆ: ಪುಟಿನ್, ಜಿನ್‌ಪಿಂಗ್ ಭೇಟಿಯಾದ ಪ್ರಧಾನಿ ಮೋದಿ


Thursday, November 14th, 2019 8:12 am

ಬ್ರಸಿಲ್ಲಾ: ಬ್ರೆಜಿಲ್​ನ ಬ್ರಿಸಿಲ್ಲಾದಲ್ಲಿ ನಡೆಯುತ್ತಿರುವ 11ನೇ ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಧಾನಿ ಮೋದಿಯವರು ‘ಪುಟಿನ್ ಅವರೊಂದಿಗೆ ಕಳೆದ ಸಮಯ ಉತ್ತಮವಾಗಿದೆ. ಭಾರತ-ರಷ್ಯಾ ನಡುವಿನ ಸ್ನೇಹ ಸೌಹಾರ್ದತೆ ಹೀಗೆ ಮುಂದುವರಿಯಲಿದೆ.  ಉಭಯ ರಾಷ್ಟ್ರಗಳ  ಈ ದ್ವಿಪಕ್ಷೀಯ ಸಂಬಂಧಗಳಿಂದ ಭಾರತೀಯರಿಗೆ ಹೆಚ್ಚಿನ ಪ್ರಯೋಜನ ಆಗಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಮೋದಿ, ನಾವು ಚೆನ್ನೈನಲ್ಲಿ ಭೇಟಿಯಾಗಿದ್ದು, ನಮ್ಮ ಭವಿಷ್ಯದ ಪ್ರಯಾಣಕ್ಕೆ ಹೊಸ ಶಕ್ತಿಯನ್ನು ನೀಡಿತ್ತು ಎಂದರು. ಇನ್ನು ಜಿನ್​ಪಿಂಗ್​ ಅವರು 2020ರಲ್ಲಿ ಚೀನಾದಲ್ಲಿ ನಡೆಯುವ 3ನೇ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2020ರ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವಂತೆ ಬ್ರೆಜಿಲ್ ಅಧ್ಯಕ್ಷರನ್ನು ಆಹ್ವಾನಿಸಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸಿಯಾಸ್ ಬೊಲ್ಸಾನರೋ ಪ್ರಧಾನಿ ಮೋದಿ ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions