ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.

ಪಿಎಂ ಕಿಸಾನ್ ಫಲಾನುಭವಿಗಳು ಆಗಸ್ಟ್ 31 ರವರೆಗೆ ತಮ್ಮ ಇಕೆವೈಸಿಯನ್ನು ಪೂರ್ಣಗೊಳಿಸಬಹುದು ಎಂದು ಅಧಿಕೃತ ವೆಬ್ಸೈಟ್ ತಿಳಿಸಿದೆ. “ಎಲ್ಲಾ ಪಿಎಂಕಿಸಾನ್ ಫಲಾನುಭವಿಗಳಿಗೆ ಇಕೆವೈಸಿಯ ಗಡುವನ್ನು 2022 ರ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ” ಎಂದು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಧಿಕೃತ ವೆಬ್ಸೈಟ್ ತಿಳಿಸಿದೆ.

ಈ ಮೊದಲು, ಇಕೆವೈಸಿಗೆ ಕೊನೆಯ ದಿನಾಂಕ ಜುಲೈ 31 ಆಗಿತ್ತು. ವಿಶೇಷವೆಂದರೆ, ಎಲ್ಲಾ ಅರ್ಹ ಫಲಾನುಭವಿಗಳು ತಮ್ಮ ಇಕೆವೈಸಿಯನ್ನು ಪೂರ್ಣಗೊಳಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇಲ್ಲಿಯವರೆಗೆ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಜುಲೈ 31, ಮೇ 31 ಮತ್ತು ಮಾರ್ಚ್ 31 ರವರೆಗೆ 3 ಬಾರಿ ಗಡುವನ್ನು ವಿಸ್ತರಿಸಿತ್ತು.

“ಪಿಎಂಕಿಸಾನ್ ನೋಂದಾಯಿತ ರೈತರಿಗೆ ಇಕೆವೈಸಿ ಕಡ್ಡಾಯವಾಗಿದೆ. ಒಟಿಪಿ ಆಧಾರಿತ ಇಕೆವೈಸಿ ಪಿಎಂಕಿಸಾನ್ ಪೋರ್ಟಲ್ ನಲ್ಲಿ ಲಭ್ಯವಿದೆ. ಅಥವಾ ಬಯೋಮೆಟ್ರಿಕ್ ಆಧಾರಿತ ಇಕೆವೈಸಿಗಾಗಿ ಹತ್ತಿರದ ಸಿಎಸ್ಸಿ ಕೇಂದ್ರಗಳನ್ನು ಸಂಪರ್ಕಿಸಬಹುದು” ಎಂದು ಯೋಜನೆಯ ಅಧಿಕೃತ ವೆಬ್ಸೈಟ್ ತಿಳಿಸಿದೆ.

ನಿಮ್ಮ ಪಿಎಂ ಕಿಸಾನ್ ಯೋಜನೆ eKYC ಯನ್ನು ಆನ್ ಲೈನ್ ನಲ್ಲಿ ಪೂರ್ಣಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1: ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ – pmkisan.nic.in
ಹಂತ 2: ‘ಫಾರ್ಮರ್ಸ್ ಕಾರ್ನರ್’ ವಿಭಾಗದ ಅಡಿಯಲ್ಲಿ ‘ಇಕೆವೈಸಿ’ ಮೇಲೆ ಕ್ಲಿಕ್ ಮಾಡಿ
ಹಂತ 3: ‘ಒಟಿಪಿ ಆಧಾರಿತ ಇಕೆವೈಸಿ’ ಸೆಕ್ಷನ್ ಅಡಿಯಲ್ಲಿ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 4: ‘ಸರ್ಚ್’ ಮೇಲೆ ಕ್ಲಿಕ್ ಮಾಡಿ
ಹಂತ 5: ಈಗ ನಿಮ್ಮ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ‘ಒಟಿಪಿ ಪಡೆಯಿರಿ’ ಕ್ಲಿಕ್ ಮಾಡಿ
ಹಂತ 6: ಒಟಿಪಿಯನ್ನು ನಮೂದಿಸಿ
ಹಂತ 7: ನಮೂದಿಸಿದ ವಿವರಗಳ ಯಶಸ್ವಿ ಪರಿಶೀಲನೆಯ ನಂತರ eKYC ಅನ್ನು ಪೂರ್ಣಗೊಳಿಸಲಾಗುತ್ತದೆ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂ.ಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ, ತಲಾ 2000 ರೂ.ಗಳ ಮೂರು ಸಮಾನ 4-ಮಾಸಿಕ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

 

 

 

 

 

Share.
Exit mobile version