ನವದೆಹಲಿ : ನೋಂದಣಿಯಲ್ಲಿನ ವಂಚನೆ(Fraud)ಗಳನ್ನ ಪರಿಶೀಲಿಸಲು ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojna) ನಿಯಮಗಳನ್ನ ಬದಲಾಯಿಸಿದೆ. ಇದರಡಿ ಈಗ ಕಂತು ಪಡೆಯುವ ವಿಷಯದಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿ(Ration Card) ಕಡ್ಡಾಯಗೊಳಿಸಲಾಗಿದೆ. ಅಂದ್ರೆ, ಪಡಿತರ ಚೀಟಿ ಸಂಖ್ಯೆ(Ration Card Number) ಬಂದ ನಂತ್ರವೇ ಆ ಕುಟುಂಬದ ಸಂಗಾತಿ ಅಥವಾ ಒಬ್ಬ ಸದಸ್ಯರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಸಿಗುತ್ತೆ.
ಪಿಎಂ ಕಿಸಾನ್ ಯೋಜನೆಯಡಿ ಮೊದಲ ಬಾರಿಗೆ ನೋಂದಣಿ (Registration) ಮಾಡಿದ್ರೆ, ಪಡಿತರ ಚೀಟಿ ಸಂಖ್ಯೆಯನ್ನ ಅಪ್ ಲೋಡ್(Upload) ಮಾಡಬೇಕು. ಅಂದ್ರೆ, ಯೋಜನೆಯಡಿ ಹೊಸ ನೋಂದಣಿಗಳ ಮೇಲೆ ಪಡಿತರ ಕಾರ್ಡ್ ಸಂಖ್ಯೆ ಒದಗಿಸುವುದು ಈಗ ಕಡ್ಡಾಯ. ಇದಲ್ಲದೆ, ದಾಖಲೆಯ ಸಾಫ್ಟ್ ಪ್ರತಿಯನ್ನ ರಚಿಸಬೇಕು ಮತ್ತು ಪಿಡಿಎಫ್ ಆಗಿ ಪೋರ್ಟಲ್ʼಗೆ ಅಪ್ ಲೋಡ್ ಮಾಡಬೇಕು. ಅದು ಇಲ್ಲದೆ ನೀವು ಮುಂದಿನ ಕಂತನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಈ ದಾಖಲೆಗಳನ್ನ ತೆಗೆದುಹಾಕಬೇಕಾಗಿದೆ..!
ಪಿಎಂ ಕಿಸಾನ್ ಯೋಜನೆಯಡಿ, ಕಂತುಗಳನ್ನ ಪಡೆಯಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಪ್ರಣಾಳಿಕೆಯ ಹಾರ್ಡ್ ಪ್ರತಿಗಳ ಕಡ್ಡಾಯ ಸಲ್ಲಿಕೆಯನ್ನ ಈಗ ರದ್ದುಗೊಳಿಸಲಾಗಿದೆ. ಫಲಾನುಭವಿಗಳು ಈಗ ಪೋರ್ಟಲ್ʼನಲ್ಲಿ ದಾಖಲೆಗಳ ಪಿಡಿಎಫ್ ಫೈಲ್ʼಗಳನ್ನು ರಚಿಸಬೇಕಾಗುತ್ತದೆ ಮತ್ತು ಅಪ್ ಲೋಡ್ ಮಾಡಬೇಕಾಗುತ್ತದೆ. ಇದು ಪಿಎಂ ಕಿಸಾನ್ ಯೋಜನೆಯ ವಂಚನೆಗಳನ್ನ ನಿಗ್ರಹಿಸಲು ಸಹಾಯ ಮಾಡುತ್ತದೆ. ನೋಂದಣಿಯೂ ಮೊದಲಿಗಿಂತ ಸುಲಭವಾಗಲಿದೆ.
10ನೇ ಕಂತು ಬಿಡುಗಡೆ..!
ಈ ಯೋಜನೆಯಡಿ ಸರ್ಕಾರ ಇತ್ತೀಚೆಗೆ 10ನೇ ಕಂತನ್ನು ಬಿಡುಗಡೆ ಮಾಡಿದೆ. ಮುಂದಿನ ಕಂತಿನ ಪ್ರಯೋಜನಗಳನ್ನು ಪಡೆಯಲು ಯೋಜನೆಯಲ್ಲಿ ಮುಂಚಿತವಾಗಿ ನೋಂದಾಯಿಸಿ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10ನೇ ಕಂತನ್ನು ಸರ್ಕಾರ ಜನವರಿ 1, 2022ರಂದು ಬಿಡುಗಡೆ ಮಾಡಿದೆ.
ವಾರ್ಷಿಕ 6000 ರೂ ಪಡೆಯಿರಿ…!
ಪಿಎಂ ಕಿಸಾನ್ ಯೋಜನೆಯಡಿ ದೇಶಾದ್ಯಂತ ಕೋಟ್ಯಂತರ ರೈತರು ವಾರ್ಷಿಕ 6000 ರೂ. ನೀಡಲಾಗುತ್ತೆ. ಸರ್ಕಾರವು ಹಣವನ್ನ ಆನ್ ಲೈನ್ʼನಲ್ಲಿ ರೈತರ ಖಾತೆಗೆ ವರ್ಗಾಯಿಸುತ್ತದೆ. ನೀವೂ ರೈತರಾಗಿದ್ದರೂ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದಿದ್ದರೆ ಆತಂಕ ಪಡಬೇಕಾದ ಅಗತ್ಯವಿಲ್ಲ. ನೀವು ನಿಮ್ಮ ಹೆಸರನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ನೋಂದಾಯಿಸಬಹುದು, ಇದರಿಂದ ನೀವು ಸರ್ಕಾರದ ಯೋಜನೆಯ ಲಾಭವನ್ನ ಪಡೆಯಬಹುದು.