ಚಿಕ್ಕಬಳ್ಳಾಪುರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನಂತ್ರ, ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಏನು ಹೇಳಿದ್ರು ಅಂತ ಮುಂದೆ ಓದಿ.

ಈ ಕುರಿತಂತೆ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ಬಳಿಯಲ್ಲಿ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಗರಂ ಆದಂತ ಅವರು, ದಯವಿಟ್ಟು ಇಂತಹ ವಿಷಯಗಳನ್ನು ನನ್ನ ಬಳಿ ಚರ್ಚೆ ಮಾಡಬೇಡಿ. ಇದನ್ನು ಬಿಟ್ಟು ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿ, ಚರ್ಚೆ ಮಾಡಿ ಅಂದರು.

ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಕೇಳುವ ಅವಶ್ಯಕತೆ ಏನಿದೆ.? ಅದಕ್ಕಾಗಿ ಕಾನೂನು ಇದೆ. ಅದರ ಅಡಿಯಲ್ಲಿ ಪೊಲೀಸರು ಕ್ರಮ ವಹಿಸಲಿದ್ದಾರೆ. ಯಾಕೆ ಪ್ರಕರಣ ಬರ್ತಿದೆ ಅನ್ನೋದು ಮುಂದಿನ ದಿನಗಳಲ್ಲಿ ನಿಮಗೆ ಗೊತ್ತಾಗಲಿದೆ. ಇನ್ಮುಂದೆ ನನ್ನ ಬಳಿ ಇಂತಹ ಪ್ರಶ್ನೆಗಳನ್ನು ಕೇಳಬೇಡಿ ಅಂತ ತಿಳಿಸಿದರು.

ʻಡಿ ಬಾಸ್‌ʻ IED ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ : ನಟ ದರ್ಶನ್‌ ವಿರುದ್ಧ ಪ್ರಶಾಂತ್‌ ಸಂಬರಗಿ ಹೊಸ ಬಾಂಬ್!

BREAKING : ʻCBSEʼ ಕಂಪಾರ್ಟ್ಮೆಂಟ್ ಪರೀಕ್ಷೆ ವೇಳಾಪಟ್ಟಿ ಪ್ರಕಟ : ಈ ರೀತಿ ಚೆಕ್‌ ಮಾಡಿಕೊಳ್ಳಿ

Share.
Exit mobile version