ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್ :  ಕೆಲವೊಂದು ಕಾರಣಗಳಿಂದ ಚಳಿಗಾಲದಲ್ಲಿ ಪೈಲ್ಸ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಉದಾಹರಣೆಗೆ ಗರ್ಭಾವಸ್ಥೆ, ಬೊಜ್ಜು, ಮಾನಸಿಕ ಒತ್ತಡ ಮತ್ತು ಅನುವಂಶಿಯ ಕಾರಣಗಳಿಂದಲೂ ಕೂಡ ಮೂಲವ್ಯಾಧಿ ಅಭಿವೃದ್ಧಿಯಾಗುತ್ತದೆ.

BIGG NEWS: ರಾಹುಲ್ ಗಾಂಧಿ ಮುಖ ಸದ್ದಾಂ ಹುಸೇನ್ ನಂತೆ ಕಾಣುತ್ತಿದೆ : ಅಸ್ಸಾಂ ಸಿಎಂ ಹಿಮಂತ ಶರ್ಮಾ ವಾಗ್ದಾಳಿ | Himanta Sarma’s Dig At Rahul Gandhi

ಪೈಲ್ಸ್ ಹೆಚ್ಚಾದಾಗ ಗುದದ್ವಾರದಿಂದ ರಕ್ತಸ್ರಾವ ಉಂಟಾಗುವುದು, ಕೆರೆತ, ನೋವು, ಅಸ್ವಸ್ಥತೆ ಹೆಚ್ಚಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಫೋರ್ಟಿಸ್ ಹಾಸ್ಪಿಟಲ್ ನಲ್ಲಿನ ಡಾ. ರಿಂಗ್ಕೇಶ್ ಕುಮಾರ್ ಬನ್ಸಲ್ ಈ ಕೆಳಗಿನಂತೆ ನಾಲ್ಕು ಟಿಪ್ಸ್ ಗಳನ್ನು ಪೈಲ್ಸ್ ಹೊಂದಿರುವವರಿಗೆ ನೀಡಿದ್ದಾರೆ. ಅವುಗಳೆಂದರೆ…

​ಆಹಾರ ಪದ್ಧತಿ

ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಆಹಾರ ಪದ್ಧತಿ ಬಹಳ ಮುಖ್ಯ. ಆಹಾರ ಪದ್ಧತಿಯಲ್ಲಿ ಹಣ್ಣು, ತರಕಾರಿಗಳು ಮತ್ತು ನೀರಿನ ಅಂಶದ ಪ್ರಮಾಣ ಹೆಚ್ಚಾಗಿರಬೇಕು.

ಹೆಚ್ಚಾಗಿ ನಾರಿನ ಅಂಶ ಸಿಗುವಂತಹ ಹಸಿರು ಎಲೆ ತರಕಾರಿಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳಬೇಕು.ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಸಾಧ್ಯ ವಾದಷ್ಟು ಕಡಿಮೆ ಮಾಡಬೇಕು. ಹೆಚ್ಚಾಗಿ ಕಾಫಿ ಕುಡಿಯುವ ಅಭ್ಯಾಸವನ್ನು ಬಿಡಬೇಕು. ಏಕೆಂದರೆ ಕಾಫಿ ಉಷ್ಣ ಪದಾರ್ಥ.

BIGG NEWS: ರಾಹುಲ್ ಗಾಂಧಿ ಮುಖ ಸದ್ದಾಂ ಹುಸೇನ್ ನಂತೆ ಕಾಣುತ್ತಿದೆ : ಅಸ್ಸಾಂ ಸಿಎಂ ಹಿಮಂತ ಶರ್ಮಾ ವಾಗ್ದಾಳಿ | Himanta Sarma’s Dig At Rahul Gandhi

​ಸರಿಯಾಗಿ ನೀರು ಕುಡಿಯಬೇಕು

ಅಷ್ಟೇ ಅಲ್ಲದೆ ಚಳಿಗಾಲದಲ್ಲಿ ನಾವು ನೀರು ಕುಡಿಯುವ ಅಭ್ಯಾಸವನ್ನು ಬಿಡಲೇಬಾರದು. ನಿರ್ಜಲೀಕರಣ ಸಮಸ್ಯೆ ಕೂಡ ಪೈಲ್ಸ್ ಹೆಚ್ಚಾಗುವಂತೆ ಮಾಡುತ್ತದೆ.ಪೈಲ್ಸ್ ಅಥವಾ ಮೂಲವ್ಯಾಧಿ ಹೆಚ್ಚಾಗಲು ಇನ್ನೊಂದು ಪ್ರಮುಖ ಕಾರಣವೆಂದರೆ, ನಾವು ಚಳಿಗಾಲದಲ್ಲಿ ವ್ಯಾಯಾಮ ಮಾಡುವುದನ್ನು ಕಡಿಮೆ ಮಾಡುತ್ತೇವೆ.

ನಮ್ಮ ಜಡ ಜೀವನ ಶೈಲಿ ನಮ್ಮ ಕರುಳಿನ ಕೆಲಸ ಕಾರ್ಯಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಕೂಡ ಮೂಲವ್ಯಾಧಿ ಸಮಸ್ಯೆ ವೃದ್ಧಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.

​ಈ ವಿಷ್ಯ ಗೊತ್ತಿರಲಿ…
ಯಾವುದೇ ಕಾರಣಕ್ಕೂ ಮಲವಿಸರ್ಜನೆಗೆ ಎಂದು ಕುಳಿತಾಗ ನ್ಯೂಸ್ ಪೇಪರ್ ಓದುವುದು ಅಥವಾ ಮೊಬೈಲ್ ನೋಡುವುದು ಮಾಡಬಾರದು. ಏಕೆಂದರೆ ನಮ್ಮ ಗಮನ ಇದರಿಂದ ಬೇರೆ ಬೇರೆ ಕಡೆಗೆ ಹೋಗುತ್ತದೆ ಮತ್ತು ಮಲವಿಸರ್ಜನೆ ತುಂಬಾ ತಡವಾಗಿ ಆಗುತ್ತದೆ.https://kannadanewsnow.com/kannada/face-turning-into-saddam-hussein-himanta-sarmas-dig-at-rahul-gandhi/

ಗುದದ್ವಾರದ ಬಳಿ ಇರುವ ಸೂಕ್ಷ್ಮ ಮಾಂಸ ಖಂಡಗಳ ಮೇಲೆ ಅತಿಯಾದ ಒತ್ತಡ ಎದುರಾಗುತ್ತದೆ. ಇದು ಮಲಬದ್ಧತೆ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಮೂಲವ್ಯಾಧಿ ಸಮಸ್ಯೆ ಕೂಡ ಹೆಚ್ಚುತ್ತದೆ. ಹಾಗಾಗಿ ಚಳಿಗಾಲ ಆದರೂ ಕೂಡ ನಿಯಮಿತ ವ್ಯಾಯಾಮ ಅಗತ್ಯ ಎಂದು ವೈದ್ಯರು ಹೇಳುತ್ತಾರೆ.

BIGG NEWS: ರಾಹುಲ್ ಗಾಂಧಿ ಮುಖ ಸದ್ದಾಂ ಹುಸೇನ್ ನಂತೆ ಕಾಣುತ್ತಿದೆ : ಅಸ್ಸಾಂ ಸಿಎಂ ಹಿಮಂತ ಶರ್ಮಾ ವಾಗ್ದಾಳಿ | Himanta Sarma’s Dig At Rahul Gandhi

​ಬಿಸಿ ನೀರಿನ ಬಾತ್ ಟಬ್ಉಗುರು ಬೆಚ್ಚಗಿನ ತಾಪಮಾನದಲ್ಲಿರುವ ಬಿಸಿ ನೀರಿನ ಬಾತ್ ಟಬ್ ನಲ್ಲಿ ಕುಳಿತು ಕೊಳ್ಳುವುದು ಕೂಡ ಪೈಲ್ಸ್ ನಿಯಂತ್ರಣಕ್ಕೆ ಒಂದು ಒಳ್ಳೆಯ ಟೆಕ್ನಿಕ್. ಏಕೆಂದರೆ ಗುದದ್ವಾರದ ಬಳಿ ಇರುವ ಮಾಂಸ ಖಂಡಗಳಲ್ಲಿ ಮತ್ತು ರಕ್ತನಾಳಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುತ್ತದೆ. ಇದರಿಂದ ಕ್ರಮೇಣವಾಗಿ ಮೂಲವ್ಯಾದಿಯ ನೋವು ಕಡಿಮೆಯಾಗುತ್ತದೆ. ಒಂದು ವೇಳೆ ಸಮಸ್ಯೆ ಹೆಚ್ಚಾದರೆ ಸಾಧ್ಯವಾದಷ್ಟು ಬೇಗನೆ ಇದಕ್ಕೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ಹಾಗಾಗಿ ನಿರ್ಲಕ್ಷತನ ಬೇಡ.

BIGG NEWS: ರಾಹುಲ್ ಗಾಂಧಿ ಮುಖ ಸದ್ದಾಂ ಹುಸೇನ್ ನಂತೆ ಕಾಣುತ್ತಿದೆ : ಅಸ್ಸಾಂ ಸಿಎಂ ಹಿಮಂತ ಶರ್ಮಾ ವಾಗ್ದಾಳಿ | Himanta Sarma’s Dig At Rahul Gandhi

Share.
Exit mobile version