ವಿಜಯಪುರ : ನಾಳೆಯಿಂದ (ನವೆಂಬರ್ 19) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ2022 ಹಾಗೂ ಡಿಪ್ಲೊಮ ಸಾಮಾನ್ಯ ಪ್ರವೇಶ ಪರೀಕ್ಷೆ 2022 ನಡೆಸಲಿದೆ.

ಈಗಾಗಲೇ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಕಲ ತಯಾರಿ ನಡೆಸಿದೆ. ನಗರದ 2 ಪರೀಕ್ಷಾ ಕೇಂದ್ರಗಳಲ್ಲಿ ಡಿಸಿಇಟಿ ಮತ್ತು ಪಿಜಿಸಿಇಟಿ ಪರೀಕ್ಷೆಗಳು ನ.19 ಹಾಗೂ 20 ರಂದು ವಿಜಯಪುರ ಜರುಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಪರೀಕ್ಷಾ ಕೇಂದ್ರದ 200 ಪ್ರದೇಶದ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯುವ ದಿನದಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದು, ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಇಂಟರ್ ನೆಟ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಈ ವೇಳೆ ತೆರೆಯದಂತೆ ಆದೇಶಿಸಲಾಗಿದೆ.

HEALTH TIPS: ಚಳಿಗಾಯದಲ್ಲಿ ಚಿಕ್ಕ ಮಗುವಿನ ಆರೈಕೆ ಹೇಗೆ ? ರೋಗಗಳನ್ನು ತಡೆಗಟ್ಟಲು ಇಲ್ಲಿವೆ 5 ಸಲಹೆಗಳು

BIGG NEWS : ‘ಪಂಚರತ್ನ’ ಸಮಾವೇಶದಲ್ಲಿ ‘ಜೆಡಿಎಸ್’ ಸೋಲಿಗೆ ಕಾರಣ ಬಿಚ್ಚಿಟ್ಟ H.D ಕುಮಾರಸ್ವಾಮಿ |JDS Pancharatna

Share.
Exit mobile version