ಸುಭಾಷಿತ :

Wednesday, January 22 , 2020 12:10 PM

ಭಾರತೀಯ ಸೇನೆ ವಿರುದ್ಧ ಹೋರಾಡಲು ಉಗ್ರರಿಗೆ ನಾವೇ ತರಬೇತಿ ನೀಡಿದ್ದೇವೆ : ಮುಷರಫ್ ಹೇಳಿಕೆಯಿಂದ ಪಾಕ್ ನಿಜಬಣ್ಣ ಬಯಲು


Thursday, November 14th, 2019 5:05 pm

ಸ್ಲಾಮಾಬಾದ್ : ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕ್ ನಲ್ಲೇ ತರಬೇತಿ ನೀಡಲಾಗುತ್ತಿತ್ತು. ಅವರಿಗೆ ಶಸ್ತ್ರಾಸ್ತ್ರವನ್ನು ನಾವೇ ನೀಡಿದ್ದೇವೆಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಮಾತನಾಡಿರುವ ವಿಡಿಯೋವೊಂದನ್ನು ಪಾಕ್ ರಾಜಕಾರಣಿಯೊಬ್ಬರು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.ಈ ವಿಡೀಯೋನಲ್ಲಿ ಮುಷರಫ್ ಜಿಹಾದಿಗಳನ್ನು ಪಾಕಿಸ್ತಾನದ ಹಿರೋಗಳೆಂದು ಬಣ್ಣಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಮುಷರಫ್, ಪಾಕಿಸ್ತಾನಕ್ಕೆ ಆಗಮಿಸಿದ್ದ ಕಾಶ್ಮೀರಿಗಳನ್ನು ಇಲ್ಲಿ ಹೀರೋಗಳಂತೆ ಸ್ವಾಗತಿಸಲಾಗಿದೆ. ಅವರಿಗೆ ತರಬೇತಿ ನೀಡಿ ಬೆಂಬಲ ನೀಡುತ್ತಿದ್ದೇವೆ. ಅವರನ್ನು ಮುಜಾಹಿದ್ದೀನ್‍ಗಳೆಂದು ಪರಿಗಣಿಸಿದ್ದು, ಭಾರತೀಯ ಸೈನಿಕರೊಂದಿಗೆ ಹೋರಾಡಲಿದ್ದಾರೆ. ನಂತರ ಲಷ್ಕರ್-ಎ-ತೋಯ್ಬಾದಂತಹ ವಿವಿಧ ಭಯೋತ್ಪಾದಕ ಸಂಘಟನೆಗಳು ಹೆಚ್ಚಳವಾಗಲಿವೆ. ಈ ಮೂಲಕ ಜಿಹಾದಿಗಳು ನಮ್ಮ ಹೀರೋಗಳಾಗುತ್ತಾರೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಪಾಕಿಸ್ತಾನದ ರಾಜಕಾರಣಿ ಫರ್ಹತುಲ್ಲಾ ಬಾಬರ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಮುಷರಫ್, ಒಸಾಮಾ ಬಿನ್ ಲಾಡೆನ್ ಹಾಗೂ ಜಲಾಲುದ್ದೀನ್ ಹಕ್ಕಾನಿಯಂತಹ ಭಯೋತ್ಪಾದಕರು ಹೀರೋಗಳು. 1979ರಲ್ಲಿ ನಾವು ಪಾಕಿಸ್ತಾಮುಜಾಹಿದ್ದೀನ್‍ಗಳನ್ನು ಪ್ರಪಂಚದಾದ್ಯಂತ ಕರೆತಂದಿದ್ದೇವೆ. ಅವರಿಗೆ ತರಬೇತಿ ನೀಡುತ್ತಿದ್ದೇವೆ, ಅಲ್ಲದೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದೇವೆ. ತಾಲಿಬಾನಿಗಳಿಗೂ ತರಬೇತಿ ನೀಡುತ್ತಿದ್ದೇವೆ. ಅವರೂ ಸಹ ನಮ್ಮ ಹೀರೋಗಳು. ಹಕ್ಕಾನಿ, ಒಸಾಮಾ ಬಿನ್ ಲಾಡೆನ್, ಜವಾಹಿರಿ ನಮ್ಮ ನಾಯಕರಾಗಿದ್ದರೆಂದು ತಿಳಿಸಿದ್ದಾರೆ.

ಮುಷರಫ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಯೋತ್ಪಾದಕರ ವಿಚಾರದಲ್ಲಿ ಪದೇಪದೇ ನುಣುಚಿಕೊಳ್ಳುತ್ತಿರುವ ಪಾಕಿಸ್ತಾನದ ನಿಜಬಣ್ಣವನ್ನು ಬಯಲು ಮಾಡಿದೆ…

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions