ಜಿಮ್ ಮಾಡುವುದರ ಜೊತೆಗೆ ಈ ಆಹಾರಗಳನ್ನು ತ್ಯಜಿಸಿದರೆ ಮಾತ್ರ ಪರ್ಫೆಕ್ಟ್ ಬಾಡಿ ನಿಮ್ಮದಾಗುವುದು… – Kannada News Now


Health Lifestyle

ಜಿಮ್ ಮಾಡುವುದರ ಜೊತೆಗೆ ಈ ಆಹಾರಗಳನ್ನು ತ್ಯಜಿಸಿದರೆ ಮಾತ್ರ ಪರ್ಫೆಕ್ಟ್ ಬಾಡಿ ನಿಮ್ಮದಾಗುವುದು…

ಸ್ಪೆಷಲ್ ಡೆಸ್ಕ್ : ಪ್ರತಿಯೊಬ್ಬ ಪುರುಷನಿಗೂ ತನಗೆ ಜಿಮ್ ಬಾಡಿ, ಸಿಕ್ಸ್ ಪ್ಯಾಕ್ ದೇಹ ಬೇಕೆಂದು ಬಯಸುತ್ತಾರೆ, ಆದರೆ ಅದಕ್ಕಾಗಿ ನೀವು ಅದೆಷ್ಟೋ ಬೆವರು ಹರಿಸಿದರೂ ಸಹ, ಸರಿಯಾದ ಡಯಟ್‌ ಮಾಡದೇ ಇದ್ದರೆ ನಿಮ್ಮ ಎಲ್ಲಾ ವ್ಯಾಯಮ ವ್ಯರ್ಥವಾಗುತ್ತದೆ. ಆದುದರಿಂದ ಕೆಲವೊಂದು ಆಹಾರಗಳಿಂದ ನೀವು ಸಾಧ್ಯವಾದಷ್ಟು ದೂರ ಇರೋದೆ ಉತ್ತಮ..

ಯಾವುದೆಲ್ಲಾ ಆಹಾರಗಳಿಂದ ದೂರವಿದ್ದರೆ ಫಿಟ್‌ ಬಾಡಿ ಪಡೆಯಬಹುದು ನೋಡಿ…

ಚಾಕಲೇಟ್‌ನಿಂದ ದೂರ : ಚಾಕಲೇಟ್‌ನಲ್ಲಿ ಹೆಚ್ಚಿನ ಪ್ರಮಾಣದ ಫ್ಯಾಟ್‌ ಮತ್ತು ಕ್ಯಾಲರಿ ಇರುತ್ತದೆ. ಇದು ನಿಮ್ಮನ್ನು ಫಿಟ್‌ ಮಾಡುವ ಬದಲಾಗಿ ತೂಕ ಹೆಚ್ಚಿಸುತ್ತದೆ. ಪರ್ಫೆಕ್ಟ್ ಬಾಡಿ ಬೆಳೆಸಬೇಕು ಎಂದಾದರೆ ಚಾಕಲೇಟ್‌ನಿಂದ ದೂರ ಇರಬೇಕು.

ಐಸ್‌ಕ್ರೀಂ : ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಐಸ್‌ಕ್ರೀಂ ಎಂದರೆ ಇಷ್ಟ. ಆದರೆ ಇದರಲ್ಲೂ ಫ್ಯಾಟ್‌ ಹೆಚ್ಚಾಗಿರುವ ಕಾರಣ ತೂಕ ಹೆಚ್ಚುತ್ತದೆ. ಜೊತೆಗೆ ಮಧುಮೇಹ, ರಕ್ತದ ಒತ್ತಡ ಮೊದಲಾದ ಸಮಸ್ಯೆ ಕಾಣಿಸುತ್ತದೆ. ಅಲ್ಲದೇ ಪ್ರತಿ ದಿನ ಐಸ್‌ ಕ್ರೀಂ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಆಲೂ ಚಿಪ್ಸ್‌ ಮತ್ತು ಕುರ್‌ಕುರೆ : ನಿಮಗೆ ಗೊತ್ತಾ 30 ಚಿಪ್ಸ್‌ನಲ್ಲಿ ಸುಮಾರು 320 ಕ್ಯಾಲರಿ ಇರುತ್ತದೆ ಮತ್ತು 20 ಗ್ರಾಂನಷ್ಟು ಫ್ಯಾಟ್‌ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕುರ್‌ಕುರೆ ತಿನ್ನುವುದರಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಕೂಡ ಇದೆ. ಉತ್ತಮ ದೇಹ ಸಿರಿ ಹೊಂದಲು ಇವನ್ನು ತ್ಯಜಿಸಿ.

ಪಿಜ್ಜಾ – ಬರ್ಗರ್ : ಪಿಜ್ಜಾ ಇಷ್ಟ ಪಡದೇ ಇರುವವರು ಯಾರೂ ಇರಲಾರರು. ಆದರೆ ನೀವು ಬಾಡಿ ಬಿಲ್ಡ್‌ ಮಾಡಲು ಬಯಸಿದರೆ ಇದರಿಂದ ದೂರ ಇರಿ. ಯಾಕೆಂದರೆ ಒಂದು ಸ್ಲೈಸ್‌ ಪಿಜ್ಜಾದಲ್ಲಿ 300 ಕ್ಯಾಲರಿ ಮತ್ತು 20 ಗ್ರಾಂನಷ್ಟು ಫ್ಯಾಟ್‌ ಇರುತ್ತದೆ. ಅದರಂತೆ ಚೀಸ್‌ , ಬರ್ಗರ್‌ ಸಹ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಜಿಮ್ ಜೊತೆಗೆ ಉತ್ತಮ ಡಯಟ್ ಪಾಲಿಸಿ,, ಇಂತಹ ಆಹಾರಗಳಿಂದ ಸಾಧ್ಯವಾದಷ್ಟು ದೂರ ಇದ್ದರೆ, ಖಂಡಿತವಾಗಿಯೂ ಪರ್ಫೆಕ್ಟ್ ದೇಹ ನಿಮದಾಗುತ್ತದೆ.