ಬೆಂಗಳೂರು : ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ರಾಜ್ಯದ ಜನತೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. 200 ಯೂನಿಟ್ ಒಳಗೆ ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ. ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ ಎಂದರು.
ಕಾಂಗ್ರೆಸ್ಸಿಗರು 40 ಕ್ಷೇತ್ರದ ಹೆಚ್ಚು ಕಡೆ ಕೂಪನ್ ಹಂಚಿದ್ದಾರೆ. ಅಮಾಯಕ ಜನರಿಗೆ 5 ಸಾವಿರ ಕೂಪನ್ ಹಂಚಿದ್ದಾರೆ. ಬಿಜೆಪಿ ವಿರುದ್ಧ 40 % ಕಮಿಷನ್ ಆರೋಪ ಮಾಡಿದ್ದೀರಾ ನೀವು..ನೀವು ಇದಕ್ಕೆ ಎಷ್ಟು ಕಮಿಷನ್ ಪಡೆದಿದ್ದೀರಾ..? ಎಂದು ಪ್ರಶ್ನಿಸಿದ್ದಾರೆ. ಚುನಾವಣೆಗೂ ಮುನ್ನ ನಿನಗೂ ಫ್ರೀ..ನನಗೂ ಫ್ರೀ ಎಂದಿದ್ದರು. ಈಗ ಕಾಂಗ್ರೆಸ್ ನಾಯಕರು ಮೋಸದ ರಾಜಕಾರಣ ಮಾಡುತ್ತಿದ್ದಾರೆ. ಮೊದಲು ಕೊಟ್ಟ ಭರವಸೆ ಈಡೇರಿಸಲಿ ಎಂದರು. ಇದೇ ಸಿಎಂ ಸಿದ್ದರಾಮಯ್ಯ ನನಗೂ ಫ್ರೀ..ನಿನಗೂ ಫ್ರೀ ಎಂದಿದ್ದರು.ಮೊದಲ ಸಂಪುಟದಲ್ಲೇ ಎಲ್ಲಾ ಗ್ಯಾರೆಂಟಿ ಜಾರಿ ಎಂದಿದ್ದರು. ಕುತಂತ್ರದ ರಾಜಕಾರಣ ನಡೆಸಿ ಜನರನ್ನು ವಂಚಿಸಲಾಗಿದೆ ಎಂದು ಹೆಚ್ಡಿಕೆ ಕಿಡಿಕಾರಿದರು.
‘ನಾವು ಘೋಷಿಸಿರುವ 5 ಗ್ಯಾರೆಂಟಿಗಳು ಶೀಘ್ರವೇ ಜಾರಿಗೆ ಬರಲಿದೆ’ : ಸಚಿವ ರಾಮಲಿಂಗಾ ರೆಡ್ಡಿ ಭರವಸೆ
ಬೆಂಗಳೂರು : ನಾವು ಘೋಷಿಸಿರುವ 5 ಗ್ಯಾರೆಂಟಿಗಳನ್ನು ಶೀಘ್ರವೇ ಜಾರಿಗೆ ತರುತ್ತೇವೆ’ ಎಂದು ನೂತನ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ.
ಗ್ಯಾರೆಂಟಿ ಯೋಜನೆ ಜಾರಿ ಮಾಡದಿದ್ದರೆ ಜೂನ್ 1 ರಿಂದ ಪ್ರತಿಭಟನೆ ಮಾಡುತ್ತೇವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಹೋರಾಟ ಮಾಡುವ ಅವಶ್ಯಕತೆ ಇಲ್ಲ, ನಾವು ಘೋಷಿಸಿರುವ 5 ಗ್ಯಾರೆಂಟಿಗಳನ್ನು ಶೀಘ್ರವೇ ಜಾರಿಗೆ ತರುತ್ತೇವೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 600 ಹೆಚ್ಚು ಭರವಸೆ ನೀಡಿತ್ತು, ಅದನ್ನು ಈಡೇರಿಸಿದ್ಯಾ..? ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು.ಮೋದಿ ಹಣ ಹಾಕಿದ್ರಾ ಎಂದು ಪ್ರಶ್ನಿಸಿದ್ದಾರೆ. ಇಂದು ಸಚಿವ ಸಂಪುಟ ವಿಸ್ತರಣೆ ಫೈನಲ್ ಆಗಲಿದೆ. 99 % ಸಚಿವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.
‘ನಾವು ಘೋಷಿಸಿರುವ 5 ಗ್ಯಾರೆಂಟಿಗಳು ಶೀಘ್ರವೇ ಜಾರಿಗೆ ಬರಲಿದೆ’ : ಸಚಿವ ರಾಮಲಿಂಗಾ ರೆಡ್ಡಿ ಭರವಸೆ