ಬೆಂಗಳೂರು: ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ನಾಗರಿಕ ಗ್ರಹಿಕೆ ಸಮೀಕ್ಷೆ, ಸಿಟಿಜನ್ ಪರ್ಸೆಪ್ಷನ್ ಸರ್ವೆ-2022ಯನ್ನು ಕೈಗೊಳ್ಳಲಾಗಿದೆ. ಇದರ ಬಾಗವಾಗಿ ಬೆಂಗಳೂರಿನ ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಲಿದೆ. ನೀವು ಕೂಡ ನಿಮ್ಮ ಅನಿಸಿಕೆಗಳನ್ನು ನಾಗರೀಕ ಗ್ರಹಿಕೆ ಸಮೀಕ್ಷೆಯಲ್ಲಿ ವ್ಯಕ್ತ ಪಡಿಸಬಹುದಾಗಿದೆ.

‘ಚೆಕ್ ಬೌನ್ಸ್ ಕೇಸ್’ನಲ್ಲಿ ‘ಶಾಸಕ ಕೆ.ವೈ ನಂಜೇಗೌಡ’ಗೆ 49.65 ಲಕ್ಷ ದಂಡ

ಈ ಕುರಿತಂತೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಿಂದ ಮಾಹಿತಿ ಬಿಡುಗಡೆ ಮಾಡಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ನಾಗರಿಕರ ಜೀವನದ ಗುಣಮಟ್ಟವನ್ನು ನಿರ್ಣಯಿಸುವ ಸಲುವಾಗಿ ನಾಗರಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ನವೆಂಬರ್ 9 ರಿಂದ ಡಿಸೆಂಬರ್ 23, 2022 ರವರೆಗೆ ಬೆಂಗಳೂರಿನ ನಾಗರಿಕ ಗ್ರಹಿಕೆ ಸಮೀಕ್ಷೆ(Citizen perception survey)ಯನ್ನು ನಡೆಸುತ್ತಿದ್ದು, ನಾಗರಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ವ್ಯಕ್ತಪಡಿಸಲು ಕೋರಿದೆ.

‘ಚೆಕ್ ಬೌನ್ಸ್ ಕೇಸ್’ನಲ್ಲಿ ‘ಶಾಸಕ ಕೆ.ವೈ ನಂಜೇಗೌಡ’ಗೆ 49.65 ಲಕ್ಷ ದಂಡ

ಭಾರತ ಸರ್ಕಾರವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಮಿಷನ್, ಜೀವನ ಸುಲಭ ಸೂಚ್ಯಂಕ ಮೌಲ್ಯಮಾಪನದ ಕುರಿತು ನಾಗರಿಕ ಗ್ರಹಿಕೆ ಸಮೀಕ್ಷೆಯನ್ನು ಪ್ರಾರಂಭಿಸಿದೆ.

ಖಾತೆ ಮಾಡಿಕೊಡಲು 20 ಲಕ್ಷ ಲಂಚ: ನಗರಸಭೆ ಅಧ್ಯಕ್ಷೆ ಪತಿ, ಇಬ್ಬರು ಸದಸ್ಯರು ಲೋಕಾಯುಕ್ತ ಬಲೆಗೆ

ಸಾರ್ವಜನಿಕರು ಲಿಂಕ್ಗೆ(https://eol2022.org/CitizenFeedback) ಭೇಟಿ ನೀಡುವ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಾಗರಿಕ ಗ್ರಹಿಕೆ ಸಮೀಕ್ಷೆಯಲ್ಲಿ ಭಾಗವಹಿಸಿ ಪ್ರಶ್ನಾವಳಿಗಳಿಗೆ ಉತ್ತರಿಸಬಹುದು. ನಾಗರಿಕರಿಂದ ವ್ಯಕ್ತವಾಗುವ ಅಭಿಪ್ರಾಯವನ್ನಾಧರಿಸಿ ಆಡಳಿತ ಸುಧಾರಣೆ, ನೀತಿಗಳನ್ನು ರೂಪಿಸಿ ಸಾರ್ವಜನಿಕರ ನಗರದ ಒಳಿತಿಗಾಗಿ ಉತ್ತಮ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

Share.
Exit mobile version