ಬೆಂಗಳೂರು: ನಟ ಶಿವರಾಜ್ ಕುಮಾರ್ ಬಗ್ಗೆ ಪ್ರಶಾಂತ್ ಸಂಬರಗಿ ಫೇಸ್ ಬುಕ್ ನಲ್ಲಿ, ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಫಿಲ್ಮ್ ಗೆ ಸೈನ್ ಮಾಡ್ಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ’ ಎಂದು ಬರೆದುಕೊಂಡಿಡಿದ್ದಾರೆ.
ನಟ ಶಿವರಾಜ್ ಕುಮಾರ್ ಬಗ್ಗೆ ಪ್ರಶಾಂತ್ ಸಂಬರಗಿ ಅವಹೇಳನಕಾರಿಯಾಗಿ ಪೋಸ್ಟ್ ಗೆ ಗರಂ ಆಗಿರುವಂತ ನಟ ಶಿವರಾಜ್ ಕುಮಾರ್, ಪ್ರಶಾಂತ್ ಸಂಬರಗಿ ಆ ಮಾತು ವಾಪಾಸ್ ತೆಗೆದುಕೊಳ್ಳಬೇಕು ಎಂಬುದಾಗಿ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದಂತ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪ್ರಶಾಂತ್ ಸಂಬರಗಿ ಆ ಮಾತನ್ನು ವಾಸ್ ತೆಗೆದುಕೊಳ್ಳಬೇಕು. ಹಾಗೆ ಮಾತನಾಡುವುದು ಸರಿಯಲ್ಲ. ನನ್ನ ಬಳಿ ಹಣನೇ ಇಲ್ವಾ ಎಂಬುದಾಗಿ ಸಿಟ್ಟಾದರು.
ನಾನು ಹಣ ಪಡೆದುಕೊಂಡು ಇಲ್ಲಿಗೆ ಬಂದಿಲ್ಲ. ವ್ಯಾಪಕ್ಕೂ ಬಂದಿಲ್ಲ. ಹೃದಯದಿದಂ ಬಂದಿರೋದು ನಾನು. ಮನುಷ್ಯನಿಗಾಗಿ ಮನಸ್ಸಿನಿಂದ ಬಂದಿದ್ದೇನೆ. ಬೇರೆ ಯಾರನ್ನೋ ಟೀಕೆ ಮಾಡುವುದಕ್ಕೆ ನಾನು ಬಂದಿಲ್ಲ. ನಾನು ಎಲ್ಲಾ ಪ್ರಶ್ನೆಗೆ ಉತ್ತರ ಕೊಡೋದಕ್ಕೂ ಹೋಗಲ್ಲ ಎಂದರು.
ಇದೇ ವೇಳೆ ಕಾಂಗ್ರೆಸ್ ಪರ ಪ್ರಚಾರವನ್ನು ಶಿವಣ್ಣ ಮಾಡುತ್ತಿದ್ದಾರೆ ಎನ್ನುವ ವಿಚಾರ ಟ್ರೋಲ್ ಬಗ್ಗೆ ಪ್ರತಿಕ್ರಿಸಿದಂತ ಅವರು, ನೀವೇ ಮನಸ್ಸಿನಿಂದ ಯೋಚಿಸಿ, ಟ್ರೋಲ್ ಮಾಡೋದು ಸರಿನಾ ಎಂದು ನೆರೆದಿದ್ದಂತ ಜನರನ್ನು ಪ್ರಶ್ನಿಸಿದರು.
ಇಲ್ಲಿಗೆ ಬಂದಿರೋರು ಎಲ್ಲರೂ ಟ್ರೋಲ್ ಮಾಡೋಕೆ ಬಂದಿದ್ದಾರ? ಇಲ್ಲಿಗೆ ಬಂದಿರೋರು ಕಾಂಗ್ರೆಸ್ ಪಕ್ಷದವರು ಮಾತ್ರವ ಅಥವಾ ಎಲ್ಲಾ ಪಕ್ಷದವರು ಇದ್ದೀರಾ ಎಂದು ಕೇಳಿದರು.
ಎಷ್ಟು ದಿನ ಟ್ರೋಲ್ ಮಾಡೋಕೆ ಆಗುತ್ತದೆ. ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ತಲೆಯಿಂದ ಯೋಚಿಸಬಾರದು, ಹೃದಯದಿಂದ ಯೋಜಿಸಬೇಕು. ಸಾವಿರ ಜನರು ಹೇಳುತ್ತಾರೆ ಎಂದು ಫಾಲೋ ಮಾಡಬಾರದು ಎಂದರು.