ಕಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಸಂಭಾವನೆ ಬಗ್ಗೆ ಕಾಲಿವುಡ್ ನಿಂದ ಬಾಲಿವುಡ್ ವರೆಗೂ ಚರ್ಚೆಯಾಗ್ತಿದೆ. ರಾಜಾ-ರಾಣಿ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದ ಅಟ್ಲೀ ಮೊದಲ ಸಿನಿಮಾದಲ್ಲಿ ಗೆಲುವಿನ ಸಿಕ್ಸರ್ ಬಾರಿಸಿದ್ದರು. ಆ ನಂತ್ರ ನಿರ್ದೇಶಿಸಿದ ಬಿಗಿಲ್, ಥೇರಿ, ಮರ್ಸಲ್ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಗೆ ಸೇರಿಕೊಂಡವು. ಹೀಗಾಗಿ ಅಟ್ಲೀ ಖ್ಯಾತಿ ದುಪ್ಪಟ್ಟಾಯ್ತು. ಬಾಲಿವುಡ್ ನಿಂದ ಆಫರ್ಸ್ ಗಳು ಬರೋದಿಕ್ಕೆ ಶುರುವಾದವು.
ಯಶಸ್ಸಿನ ಉತ್ತುಂಗದಲ್ಲಿರುವ ನಿರ್ದೇಶಕ ಅಟ್ಲೀ, ಸದ್ಯ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಗೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಈ ನಡುವೆ ಅಟ್ಲೀ ಹಾಗೂ ಅಲ್ಲು ಅರ್ಜುನ್ ಕಾಂಬೋದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಟೇಕಾಫ್ ಆಗುವ ಎಲ್ಲಾ ಮುನ್ಸೂಚನೆ ಇತ್ತು. ಲೈಕಾ ಪ್ರೊಡಕ್ಷನ್ ನಡಿ ಈ ಸಿನಿಮಾವನ್ನು ನಿರ್ಮಾಣ ಮಾಡುವ ತಯಾರಿ ಕೂಡ ಆಗಿತ್ತು. ಆದ್ರೆ ಅಟ್ಲೀ ಸಂಭಾವನೆ ವಿಚಾರ ಕೇಳಿ ಸ್ವತಃ ಅಲ್ಲು ಹೌಹಾರಿದ್ದಾರೆ ಅನ್ನೋ ಗುಸುಗುಸುಕೇಳಿ ಬರ್ತಿದೆ.
ಪುಷ್ಪ ಹಿಟ್ ಆಗ್ತಿದ್ದಂತೆ ಅಲ್ಲು ಅರ್ಜುನ್ ಸಂಭಾವನೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಅದೇ ರೀತಿ ಅಟ್ಲೀ ಕೂಡ ದೊಡ್ಡ ಮೊತ್ತದ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ. ಅಂದ್ರೆ ಬರೋಬ್ಬರಿ 40 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಅಲ್ಲು ಅರ್ಜುನ್ ಅಟ್ಲೀ ಜೊತೆ ಸಿನಿಮಾ ಬೇಡ ಅಂತಾ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ.