ಸುಭಾಷಿತ :

Wednesday, January 22 , 2020 12:10 PM

ಭಾರತೀಯ ಸೇನೆಯನ್ನು ಎದುರಿಸಲು ಕಾಶ್ಮೀರಿಗಳಿಗೆ ಪಾಕ್ ನಲ್ಲಿ ತರಭೇತಿ ನೀಡಲಾಗಿತ್ತು : ಪರ್ವೇಜ್ ಮುಷರಫ್


Thursday, November 14th, 2019 8:51 am

ಇಸ್ಲಾಮಾಬಾದ್ : ಕಾಶ್ಮೀರಿಗಳಿಗೆ ಭಾರತೀಯ ಸೇನೆಯ ವಿರುದ್ಧ ಹೋರಾಡಲು ಪಾಕಿಸ್ತಾನದಲ್ಲಿ ತರಭೇತಿ ನೀಡಲಾಗಿತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ನಿವೃತ್ತ ಜನರಲ್ ಪರ್ವೇಜ್ ಮುಷರಫ್ ಒಪ್ಪಿಕೊಂಡಿದ್ದಾರೆ.

ಅಷ್ಟೇ ಮತ್ತೊಂದು ಗಂಭೀರ ವಿಷಯವನ್ನು ತಿಳಿಸಿದ ಮುಷರಫ್ ಒಸಾಮಾ ಬಿನ್ ಲಾಡೆನ್ ಮತ್ತು ಜಲಾಲುದ್ದೀನ್ ಹಕ್ಕಾನಿಯಂತಹ ಭಯೋತ್ಪಾದಕರು ಈ ಪಾಕ್ ವೀರರನ್ನು ತಮ್ಮ ಕಾರ್ಯಾಚರಣೆಗೆ ಬಳಸಿಕೊಂಡಿದ್ದರು ಎಂದಿದ್ದಾರೆ.

ಪಾಕ್ ರಾಜಕಾರಣಿ ಫರ್ಹತುಲ್ಲಾ ಬಾಬರ್ ಬುಧವಾರ ಮುಷರಫ್ ಕುರಿತ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು ಅದರಲ್ಲಿ ಮುಷರಫ್ ಸೋವಿಯತ್ ಅನ್ನು ದೇಶದಿಂದ ಹೊರಗೆ ತಳ್ಳಲು ಅಫ್ಘಾನಿಸ್ತಾನದಲ್ಲಿ ಪರಿಚಯಿಸಿದ ಧಾರ್ಮಿಕ ಉಗ್ರಗಾಮಿತ್ವ, ಪ್ರಪಂಚದಾದ್ಯಂತ ಮುಜಾಹಿದ್ದೀನ್ ಸಂಘಟನೆ ಸ್ಥಾಪನೆ, ತರಬೇತಿ, ಶಸ್ತ್ರಾಸ್ತ್ರಗಳನ್ನು ಪೂರೈಸಿದುದ್ದನ್ನು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಪಾಕಿಸ್ತಾನಕ್ಕೆ ಬಂದ ಕಾಶ್ಮೀರಿಗಳನ್ನು ನಾವು ಹೀರೋ ಆಗಿ ಸ್ವಾಗತಿಸಿದ್ದೇವೆ. ಅವರಿಗೆ ಸೂಕ್ತ ತರಬೇತಿ ನೀಡಿ, ಬೆಂಬಲಿಸುತ್ತಿದ್ದೆವು. ಆಗ ನಾವು ಅವರನ್ನು ಭಾರತೀಯ ಸೇನೆಯೊಂದಿಗೆ ಹೋರಾಡುವ ಮುಜಾಹಿದ್ದೀನ್ ಎಂದು ಪರಿಗಣಿಸಿದ್ದೇವು ಎಂಬ ಶಾಕಿಂಗ್ ಸುದ್ದಿ ನೀಡಿದ್ದಾರೆ.

ಮುಷರಫ್ ಈ ಹೇಳಿಕೆ ಇದೀಗ ಕಾಶ್ಮೀರದಲ್ಲಿ ನಾವು ಉಗ್ರವಾದ ಸೃಷ್ಟಿಸುತ್ತಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions