ಸುಭಾಷಿತ :

Monday, March 30 , 2020 1:49 AM

ಪಾಕ್ ಪರ ಘೋಷಣೆ ಪ್ರಕರಣ : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಮೂಲ್ಯ, ಆರ್ದ್ರಾಗೆ ಒಂದೇ ಕೊಠಡಿ.?


Saturday, February 22nd, 2020 10:06 am

ಬೆಂಗಳೂರು : ಫ್ರೀಡಂ ಪಾರ್ಕ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಹಾಗೂ ಟೌನ್ ಹಾಲ್ ಬಳಿಯಲ್ಲಿ ಪಾಕ್ ಪರ ಘೋಷಣೆ ಕೂಗಿದಂತ ಆರ್ದ್ರಾ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವಾಗಿದೆ. ಈ ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಂತಹ ದೇಶದ್ರೋಹ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದೇ ಕೊಠಡಿಯಲ್ಲಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

ನಗರ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಓವೈಸಿ ಪ್ರತಿಭಟನೆಯ ವೇಳೆಯಲ್ಲಿ ವೇದಿಕೆ ಏರಿದ್ದ ಅಮೂಲ್ಯ ಲಿಯೋನ್, ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿದ್ದರು. ಹೀಗೆ ಘೋಷಣೆ ಕೂಗಿದ್ದ ಯುವತಿಯನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ದೇಶದ್ರೋಹ ಆರೋಪದಡಿ ನ್ಯಾಯಾಂಗ ಬಂಧನದ ಮೂಲಕ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

ಈ ಬಳಿಕೆ ಕಳೆದ ನಿನ್ನೆ ನಗರ ಟೌನ್ ಹಾಲ್ ಬಳಿ ಕರವೇ ಕಾರ್ಯಕರ್ತರಿಂದ ಅಮೂಲ್ಯ ದೇಶದ್ರೋಹ ಹೇಳಿಕೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಆರ್ದ್ರಾ ಎಂಬ ಯುವತಿ ಕೂಡ ಪಾಕ್ ಪರ ಘೋಷಣೆ ಕೂಗಿದ್ದರು. ಇಂತಹ ಯುವತಿಯನ್ನು ಬಂಧಿಸಿದ್ದ ಎಸ್ ಜೆ ಪಾರ್ಕ್ ಪೊಲೀಸರು ಕೋರಮಂಗಲದ 6ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಧೀಶರ ಮುಂದೆ ಹಾಜರು ಪಡಿಸಿದ್ದರು. ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ಇರಿಸಿ, ಆದೇಶ ಹೊರಡಿಸಿದ್ದರು.

ಈ ಎರಡು ಪ್ರಕರಣದಲ್ಲಿ ಆರೋಪಿಗಳಾದಂತ ಅಮೂಲ್ಯ ಹಾಗೂ ಆರ್ದ್ರಾ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಆದ್ರೇ ಇಬ್ಬರೂ ಪಾಕ್ ಪರ ಘೋಷಣೆ ಕೂಗಿದವರನ್ನು ಒಂದೇ ಜೈಲಿನಲ್ಲಿ ಇರಿಸಲಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಒಂದೇ ಕೊಠಡಿಯನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions