ನವದೆಹಲಿ : ಭಾರೀ ಸದ್ದು ಮಾಡಿದ್ದ ಪನಾಮಾ ಪೇಪರ್ಸ್ ಪ್ರಕರಣ ಸಂಬಂಧ ಕೋರ್ಟ್‌ ಇಂದು ಮಹತ್ವದ ತೀರ್ಪು ನೀಡಿದ್ದು, 28 ಆರೋಪಿಗಳನ್ನು ಪನಾಮಾ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.

ತೆರಿಗೆ ವಂಚನೆ ಮತ್ತು ಮನಿ ಲಾಂಡರಿಂಗ್ ಹಗರಣವು ವಿಶ್ವದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ವರ್ಷಗಳ ಹಿಂದೆ, ಈ ಪ್ರಕರಣದ ಬಹಿರಂಗಪಡಿಸುವಿಕೆಯು ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಇದು ಭಾರೀ ಸದ್ದು ಮಾಡಿತ್ತು. ಈ ಪನಾಮಾ ಪೇಪರ್ಸ್ ಪಾಕಿಸ್ತಾನದ ಪ್ರಧಾನಿ ಗದ್ದುಗೆಯನ್ನೇ ಅಲ್ಲಾಡಿಸಿದ್ದು ಮಾತ್ರವಲ್ಲದೇ ಭಾರತದಲ್ಲಿ ಹಲವಾರು ಗಣ್ಯರು ಬಂಧನದ ಭೀತಿಗೆ ಒಳಗಾಗುವಂತೆ ಮಾಡಿತ್ತು

ಈ ಬಹಿರಂಗಪಡಿಸುವಿಕೆಯಲ್ಲಿ ವಿಶ್ವದ ಅನೇಕ ಪ್ರಭಾವಿ ವ್ಯಕ್ತಿಗಳ ಹೆಸರುಗಳು ಬಹಿರಂಗಗೊಂಡಿವೆ. ಏತನ್ಮಧ್ಯೆ, ‘ಪನಾಮಾ ಪೇಪರ್ಸ್’ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿದ್ದ 28 ಜನರನ್ನು ಪನಾಮಾ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ. ನ್ಯಾಯಾಲಯ ಈ ಮಾಹಿತಿ ನೀಡಿದೆ.

Share.
Exit mobile version