ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಮ್ಮ ದೇಶದಲ್ಲಿ ಆಧಾರ್ ಕಾರ್ಡ್‌ನಷ್ಟೇ ಪ್ರಾಮುಖ್ಯತೆ ಪ್ಯಾನ್ ಕಾರ್ಡ್ ಕೂಡ ಪಡೆದುಕೊಂಡಿದೆ. ಅಂದ ಹಾಗೇ ಹೆಚ್ಚಿನ ಪ್ರಮಾಣದ ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಎಂಬುದು ನಮಗೆಲ್ಲರಿಗೂ ತಿಳಿದಿದೆ, ಇದು ಇಲ್ಲದೇ ಹಣಕಾಸಿನ ವ್ಯವಹಾರವನ್ನು ಮಾಡಲು ಸಾಧ್ಯವಿಲ್ಲ ಕೂಡ. ಹೀಗಾಗಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು, ಬ್ಯಾಂಕ್ ಖಾತೆ ತೆರೆಯಲು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿ ಬೇಕಾಗಿದೆ ಕೂಡ.
PAN ಕಾರ್ಡ್ ಕಳೆದು ಹೋದರೆ, ಹೊಸ ಇ-PAN ಕಾರ್ಡ್ ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ನಿಮಗೆ ತಿಳಿದಿದ್ಯಾ? ಹಾಗಾದ್ರೇ ಇಲ್ಲಿದೆ ನೋಡಿ ಈ ಬಗ್ಗೆ ಮಾಹಿತಿ ನಿಮಗಾಗಿ.
- ಮೊದಲು ಈ NSDL ಪೋರ್ಟಲ್ ಲಿಂಕ್ ಅನ್ನು ತೆರೆಯಿರಿ.
- ಈಗ ನಿಮ್ಮ ಕಳೆದುಹೋದ ಪ್ಯಾನ್ ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಜನ್ಮ ದಿನಾಂಕ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
- ಈಗ ನೀವು ನಿಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ಪಿನ್ ಕೋಡ್ ಅನ್ನು ಮತ್ತೆ ನಮೂದಿಸಬೇಕು.
- ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
- OTP ಅನ್ನು ನೋಂದಾಯಿಸಿದ ನಂತರ ನೀವು ಇ-ಪ್ಯಾನ್ ಕಾರ್ಡ್ PDF ಅನ್ನು ಡೌನ್‌ಲೋಡ್ ಮಾಡಬಹುದು.
- e-PAN ಕಾರ್ಡ್ ಅನ್ನು ಮೂರು ಬಾರಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
BIG BREAKING NEWS: ‘ರಾಜ್ಯ ಸರ್ಕಾರ’ದಿಂದ 2022ನೇ ಸಾಲಿನ ‘ಸಾರ್ವತ್ರಿಕ ರಜಾ’ ಪಟ್ಟಿ ರಿಲೀಸ್: ಹೀಗಿದೆ ರಜೆಗಳ ಪಟ್ಟಿ
ಕೊರೊನಾ ನಿಯಂತ್ರಣಕ್ಕೆ ಕಠಿಣ ಮಾರ್ಗಸೂಚಿಗಳ ಜಾರಿಗೆ ಸರ್ಕಾರ ಸಿದ್ಧತೆ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್